Breaking News

ಆತ್ಮಹತ್ಯೆ ಮಾಡಿಕೊಂಡ ಸುರೇಶ್ ಮನೆಗೆ ಸಿಎಮ್ ಎಚ್.ಡಿ.ಕೆ ಭೇಟಿ

ಸಾಲದ ಬಾಧೆ ತಾಳಲಾರದೆ ಸೆಲ್ಪಿ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಘಲಯ ಗ್ರಾಮದ ಕೃಷಿಕೂಲಿ ಕಾರ್ಮಿಕ ರೈತ ಎ.ಎನ್. ಸುರೇಶ್ ಅವರ ಮನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಪತ್ನಿ ಜಯಶೀಲ ಅವರಿಗೆ ಐದು ಲಕ್ಷ ರೂ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು. ರೈತ ಸುರೇಶ್ ಅವರ ಪುತ್ರ ಚಂದ್ರು ಅವರಿಗೆ ಕೂಡಲೇ ಸೂಕ್ತ ಸರಕಾರಿ ಉದ್ಯೋಗ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಅವರಿಗೆ ಸೂಚನೆ ನೀಡಿದರು. ಪುತ್ರಿ ಸುವರ್ಣಗೆ ಎ.ಕಾಂ. ಶಿಕ್ಷಣ ಮುಂದುವರೆಸಲು ಅಗತ್ಯ ಸಹಾಯ ನೀಡುವ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಸುರೇಶ್ ಅವರ ವೃದ್ದ ತಂದೆ ಹಾಳಪ್ಪನ ನಂಜಪ್ಪ ಹಾಗೂ ಜಯಮ್ಮ ಅವನ್ನು ನೋಡಿ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ, ಜಿಲ್ಲಾಧಿಕಾರಿ ಮಂಜುಶ್ರೀ, ಪಾಂಡವಪುರ ಉಪ ವಿಭಾಗಾಧಿಕಾರಿ ಎಂ.ಶೈಲಜಾ, ತಹಸೀಲ್ದಾರ್ ಎಂ.ಶಿವಮೂರ್ತಿ, ಜಿ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು,ಸದಸ್ಯ ಬಿ.ಎಲ್.ದೇವರಾಜು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ, ಪುರಸಭೆಯ ಸದಸ್ಯರಾದ ಕೆ.ಎಸ್.ಸಂತೋಷ್, ಹೆಚ್.ಆರ್.ಲೋಕೇಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿಅಧ್ಯಕ್ಷ ಅಘಲಯ ರಮೇಶ್, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಜಿ.ಪ್ರಭು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *