ದೇವರಿಗೆ ದಿಗ್ಭಂಧನ ಹಾಕಿದ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ. ಎಂ ಕೆ ಹುಬ್ಬಳ್ಳಿಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿಗ್ರಾಮಸ್ಥರು ದೇವರ ಗರ್ಭ ಗುಡಿಯೊಳಗೆ ನೀರು ಹಾಕಿ ದ್ವಾರ ಮುಚ್ಚಿದ್ದಾರೆ. ಅಷ್ಟಕ್ಕೂ ಈ ರೀತಿ ಮಾಡಿರುವುದಕ್ಕೆ ಕಾರಣವಾಗಿರುವುದು ಬರಗಾಲ. ತೀವ ಬರಗಾಲ ಹಿನ್ನೆಲೆಯಲ್ಲಿ ಮಳೆಯಾಗದೇ ಇದ್ದುದರಿಂದ ಈ ರೀತಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆ ಹಾಗೂ ಸಂಪ್ರದಾಯ ಈ ಹಿಂದೆ ವಾಡಿಯಲ್ಲಿತ್ತು. ಹಿಂದೆ ಕೂಡ ಮಳೆಯಾಗದೇ ಇದ್ದಾಗ ದೇವಸ್ಥಾನದಲ್ಲಿ ನೀರು ತುಂಬಿಸಿದ್ದ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದ್ದರು. ನಂತರ ಉತ್ತಮ ಮಳೆಯಾಯಾಗಿದ್ದ ಇತಿಹಾಸವು ಇದೆ. ಇದರ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉತ್ತಮ ಮಳೆಯಾಗಲೀ ಎಂದು ಗರ್ಭ ಗುಡಿಯಲ್ಲಿ ನೀರಲ್ಲಿ ಮುಳಗಿದ ಸೂರ್ಯ ನಾರಾಯಣಿನಿಗೆ ಮೊರೆ ಹೋಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





