Breaking News

ನಾಯಕ ಇಯಾನ್​ ಮಾರ್ಗನ್​ ವಿಶ್ವದಾಖಲೆಯ ಆಟಕ್ಕೆ ಆಂಗ್ಲರಿಗೆ ಶರಣಾದ ಆಫ್ಘನ್​: ಸಿಕ್ಸರ್​ ಒಂದರಲ್ಲೇ ಮಾರ್ಗನ್​ ಗಳಿಸಿದ್ದು 102 ರನ್!​

ಮ್ಯಾಂಚೆಸ್ಟರ್​: ನಾಯಕ ಇಯಾನ್​​​ ಮಾರ್ಗನ್(148 ರನ್​, 71 ಎಸೆತ, 4 ಬೌಂಡರಿ, 17 ಸಿಕ್ಸರ್​)​ ಅವರ ವಿಶ್ವದಾಖಲೆಯ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್​ ತಂಡ ಎದುರಾಳಿ ಅಫ್ಘಾನಿಸ್ತಾನ ತಂಡವನ್ನು 150 ರನ್​ ಅಂತರದಿಂದ ಮಣಿಸಿದೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 24ನೇ ಪಂದ್ಯದಲ್ಲಿ ಆಂಗ್ಲ ಪಡೆ ನೀಡಿದ 397ರನ್​ಗಳ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ ಆಫ್ಘನ್, ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 247 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಹಶ್ಮತುಲ್ಲಾ ಶಾಹಿದಿ(76), ಅಸ್ಘರ್​ ಆಫ್ಘಾನ್​(44), ರಹಮತ್​ ಷಾ(46) ಹಾಗೂ ಗುಲ್ಬದಿನ್​ ನಬಿ(37) ರನ್​ ಕಾಣಿಕೆ ನೀಡಿದ್ದನ್ನು ಬಿಟ್ಟರೆ, ಉಳಿದ ಬ್ಯಾಟ್ಸ್​​ಮನ್​ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.ಇಂಗ್ಲೆಂಡ್​ ತಂಡದ ಪರ ಆದಿಲ್​ ರಶೀದ್ ಹಾಗೂ ಜೋಫ್ರಾ ಅರ್ಚರ್​ ತಲಾ ಮೂರು ವಿಕೆಟ್​ ಕಬಳಿಸಿ ಮಿಂಚಿದರೆ, ಮಾರ್ಕ್​ವುಡ್​ ಎರಡು ವಿಕೆಟ್​ ಪಡೆದು ಗಮನ ಸೆಳೆದರು.ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 397 ರನ್​​ ಕಲೆಹಾಕಿತು. ತಂಡದ ಪರ ನಾಯಕ ಇಯಾನ್​ ಮಾರ್ಗನ್​ (148 ರನ್​, 71 ಎಸೆತ, 4 ಬೌಂಡರಿ, 17 ಸಿಕ್ಸರ್​), ಜಾನಿ ಬೈರ್​ಸ್ಟೋವ್​(90) ಹಾಗೂ ಜೋ ರೂಟ್​(88) ತಮ್ಮ ಅದ್ಭುತ ಆಟದ ನೆರವಿನಿಂದ ಉತ್ತಮ ರನ್​ ಕಾಣಿಕೆ ನೀಡಿದರು. ಹೀಗಾಗಿ ಇಂಗ್ಲೆಂಡ್​ ತಂಡ ಬೃಹತ್​ ಮೊತ್ತವನ್ನು ಗಳಿಸಲು ಸಾಧ್ಯವಾಯಿತು.ಮಾರ್ಗನ್​ ದಾಖಲೆಪಂದ್ಯವೊಂದರಲ್ಲೇ 17 ಸಿಕ್ಸರ್​ ಬಾರಿಸುವ ಮೂಲಕ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್​​ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಮಾರ್ಗನ್​ ತಮ್ಮ ಹೆಸರಿಗೆ ಬರೆದುಕೊಂಡರು. ಅಲ್ಲದೆ, ಇನ್ನಿಂಗ್ಸ್​ ಒಂದರಲ್ಲಿ 25 ಸಿಕ್ಸರ್​ ಬಾರಿಸುವ ಮೂಲಕ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್​ ಗಳಿಸಿದ ತಂಡ ಎಂಬ ಕೀರ್ತಿಗೆ ಆಂಗ್ಲ ಪಡೆ ಭಾಜನವಾಯಿತು.ಆಫ್ಘನ್​ ಪರ ದವಲಾತ್​ ಜದ್ರಾನ್​ ಹಾಗೂ ನಾಯಕ ಗುಲ್ಬದಿನ್​ ನಬಿ ತಲಾ ಮೂರು ವಿಕೆಟ್​ ಕಬಳಿಸಿದರೂ ರನ್​ ನೀಡುವಲ್ಲಿ ದುವಾರಿಯಾದರು. ಉಳಿದ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗುವುದರೊಂದಿಗೆ ರನ್​ ನೀಡಿಕೆಯಲ್ಲಿಯೂ ಧಾರಾಳವಾದರು.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *