ತಿರುವನಂತಪುರ: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪೊಲೀಸ್ ಅಧಿಕಾರಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.ಜೂ. 15 ರಂದು ವಲ್ಲಿಕುನ್ನಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್ (34) ಎಂಬುವರ ಮೇಲೆ ಅಳುವಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಜಾಸ್ ಎಂಬ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಸೌಮ್ಯ ಅವರಿಗೆ ಬೆಂಕಿ ಹಚ್ಚುವ ವೇಳೆ ಏಜಾಸ್ಗೂ ಬೆಂಕಿ ತಗುಲಿತ್ತು. ಶೇ. 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಏಜಾಸ್ನನ್ನು ಅಳಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅತ ಬುಧವಾರ ಸಂಜೆ ಮೃತಪಟ್ಟಿದ್ದಾರೆಂದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ವಿವರತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ಸೌಮ್ಯ ಜೂನ್ 15ರ ಮಧ್ಯಾಹ್ನ 3.30ಕ್ಕೆ ಮನೆಗೆ ಮರಳುತ್ತಿದ್ದರು. ಇವರು ಚಲಾಯಿಸುತ್ತಿದ್ದ ಬೈಕ್ಗೆ ಕಾರಿನಲ್ಲಿ ಬಂದ ಏಜಾಸ್ ಡಿಕ್ಕಿ ಹೊಡೆದಿದ್ದ. ಕೆಳಗೆ ಬಿದ್ದ ಸೌಮ್ಯ ಮೇಲೆದ್ದು, ಹತ್ತಿರದಲ್ಲಿದ್ದ ಮನೆಯೊಳಗೆ ಹೋಗಿ ಬಚಾವ್ ಆಗಲು ಯತ್ನಿಸಿದ್ದರು. ಆದರೆ, ಮನೆಯೊಳಗೆ ನುಗ್ಗಿದ ಏಜಾಸ್, ಸೌಮ್ಯ ಅವರನ್ನು ಹೊರಗೆ ಎಳೆದು ತಂದು, ಕೈಕಾಲು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.ದೇಹವನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡ ಕಾರಣ ಸೌಮ್ಯ ಜೀವಂತವಾಗಿ ದಹನವಾಗಿದ್ದರು. ಅವರಿಗೆ ಬೆಂಕಿ ಹಚ್ಚುವಾಗ ಏಜಾಸ್ಗೂ ಸುಟ್ಟು ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಜನರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





