Breaking News

ಸೈಯದ್‌ ಮುಸ್ತಾಕಲಿ ಟ್ರೋಫಿ-ಫೈನಲ್ ‘ಓವರ್​’ನಲ್ಲಿ ಎಡವಿದ ಕರ್ನಾಟಕ : ತಮಿಳುನಾಡು 3ನೇ ಬಾರಿ ಚಾಂಪಿಯನ್

ತಮಿಳುನಾಡು ತಂಡ ಚಾಂಪಿಯನ್

ನವದೆಹಲಿ : ಸೈಯದ್​ ಮುಷ್ತಾಕ್ ಅಲಿ ಟ್ರೋಫಿ ಫೈನಲ್​ನ ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಸಿಡಿಸಿದ ಅದ್ಭುತ ಸಿಕ್ಸರ್​ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು4 ವಿಕೆಟ್​ಗಳ ರೋಚಕ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 151ರನ್ ​ಗಳಿಸಿತ್ತು.ಅಭಿನವ್ ಮನೋಹರ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 46 ರನ್​ಗಳಿಸಿದರೆ, ಪ್ರವೀಣ್ ದುಬೆ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 33 ರನ್​ಗಳಿಸಿ ಸವಾಲಿನ ಮೊತ್ತವನ್ನು ದಾಖಲಿಸಲು ನೆರವಾದರು.

ತಮಿಳುನಾಡು ಪರ ಸಾಯಿ ಕಿಶೋರ್‌ ಕೇವಲ 12 ರನ್​ ನೀಡಿ ಪ್ರಮುಖ 3 ವಿಕೆಟ್ ಪಡೆದು ಕರ್ನಾಟಕ ಬೃಹತ್ ಮೊತ್ತ ದಾಖಲಿಸದಂತೆ ತಡೆದರು. ಇವರಿಗೆ ಸಾಥ್ ನೀಡಿದ ಸಂದೀಪರ್ ವಾರಿಯರ್​ 34ಕ್ಕೆ1, ಟಿ ನಟರಾಜನ್​ 44ಕ್ಕೆ1, ಸಂಜಯ್ ಯಾದವ್​ 32ಕ್ಕೆ1 ವಿಕೆಟ್ ಪಡೆದರು.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *