ಪ್ರಪಂಚದಲ್ಲಿ ಅಹಿಂಸೆ ಸಮರತೆ ನೈತಿಕತೆ ವ್ಯಸನಮುಕ್ತಿಗಾಗಿ ಜೈನ ಮುನಿಯೊಬ್ಬರು ಮೂರು ದೇಶ 19 ರಾಜ್ಯಗಳಲ್ಲಿ ಉಪದೇಶ ಮಾಡುತ್ತ ಸುಮಾರು19 ಸಾವಿರ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಆ ಜೈನ ಮುನಿ ಕರ್ನಾಟಕ ಗಡಿಭಾಗ ಅತ್ತಿಬೆಲೆಗೆ ಪ್ರವೇಶಿಸಿದ್ದಾರೆ.ಇನ್ನು ಜೈನ ಮುನಿ ಆಚಾರ್ಯ ಮಾಹಾಶ್ರಮಣ್ ಸ್ವಾಮಿಜಿಯವರನ್ನು ಇಲ್ಲಿನ ಜೈನ ಧರ್ಮದ ಸುಮಾರು 10,000 ಜನರು ಬರಮಾಡಿಕೊಂಡಿದ್ದು ಮಹಾಶ್ರಮಣ್ ಜೈನ ಮುನಿ 2014 ರ ನವಂಬರ್ 14 ರಂದು ದೆಹಲಿಯ ಕೆಂಪುಕೋಟೆಯಿಂದ ಪ್ರಪಂಚದಲ್ಲಿ ಸಮರಸತೇ ನೈತಿಕತೆ ಹಾಗೂ ವ್ಯಸಮುಕ್ತಿಗಾಗಿ ಅಹಿಂಸಾ ಮಾಡಲು ಶ್ರಮಣ ಮುನಿಗಳು ನೇಪಾಳ ಭೂತಾನ್ ದೇಶಗಳಲ್ಲೂ ಪಾದಯಾತ್ರೆ ಮಾಡಿದ್ದು ಒಟ್ಟು 19ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ.ಇನ್ನು ಅತ್ತಿಬೆಲೆ ಸಮೀಪದಲ್ಲಿರುವ ಸುಶೀಲ್ ದಾಮ್’ನಲ್ಲಿ ಶ್ರಮಣ್ ಮುನಿಗಳು ಇಂದು ಪೂರ್ತಿ ದಿನ ಉಪದೇಶ ನೀಡಲಿದ್ದಾರೆ,ಇನ್ನು ಈ ಕಾರ್ಯಕ್ರಮದಲ್ಲಿ ರಾಜ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿ ಮಾತನಾಡಿ ಅಹಿಂಸವಾದಿ ಜೈನ ಮುನಿಗಳು ನಮ್ಮರಾಜಕ್ಕೆ ಆಗಮಿಸಿದ್ದು ಚಾತುರ್ ಮಾಸವನ್ನು ಆಚರಿಸಲು ನಮ್ಮ ರಾಜ್ಯವನ್ನು ಆಯ್ಕೆ ಮಾಸಿಕೊಂಡಿರುವುದು ಬಹಳ ಸಂತೋಷವಾಗಿದೆ ಇನ್ನು ನಾಲ್ಕು ತಿಂಗಳು ರಾಜ್ಯದಲ್ಲಿ ಇರಲಿದ್ದಾರೆ ಇನ್ನು ಅವರ ಪಾದಯಾತ್ರೆ ಯಶಸ್ವಿಯಾಗಲಿ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





