ಹುಬ್ಬಳ್ಳಿ
ಆ್ಯಂಕರ್’:- ಪ್ರಸ್ತುತವಾಗಿ ಜಾರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹದಳವನ್ನು ತೆಗೆದುಹಾಕಿ ಲೋಕಾಯುಕ್ತವನ್ನು ಬಲಪಡಿಸಬೇಕು ಅಲ್ಲದೇ ಆಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜಾರಿಗೊಳಿಸಬೇಕೆಂದು ಸಮಾಜಿಕ ಪರಿವರ್ತನಾ ಸಮಿತಿಯ ಮುಖ್ಯಸ್ಥ ಎಸ್ ಆರ್ ಹೀರೆಮಠ ಸರಕಾರಕ್ಕೆ ಒತ್ತಾಯಿಸಿದರು…
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಾಗಿ ಬೇರು ಬಿಟ್ಟಿದ್ದ ಗಣಿಗಾರಿಕೆ ಹಾಗೂ ಇನ್ನಿತರ ಹಗರಣಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಎಸಿಬಿ ತೆಗೆದು ಹಾಕಿ ಲೋಕಾಯುಕ್ತ ಬಲ ಪಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸ್ಪಿಕರ್ ಪಟ್ಟೆಕೃಷ್ಣ ಸೇರಿದಂತೆ ಇತರರ ನೇತೃತ್ವದಲ್ಲಿ ಪತ್ರ ಬರೆಯಲಾಗಿದೆ. ಎಂದರು.
ರಫೆಲ್ ಯುದ್ಧ ವಿಮಾನದ ಖರೀದಿ ಹಗರಣ ಬೆಳಕಿಗೆ ಬಂದಿದ್ದು, ಸಂಸತ್ತಿನ ಬಗ್ಗೆ ಕಾಳಜಿ ಇರುವ ಹಾಗೂ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದ್ದಲ್ಲಿ ಪ್ರಧಾನಮಂತ್ರಿ, ಹಣಕಾಸು ಹಾಗೂ ರಕ್ಷಣಾ ಸಚಿವರು ಸಂವಿಧಾನಿಕ ಜವಾಬ್ದಾರಿ ಅರಿತು ಈ ಹಗರಣದಿಂದ ಹೊರಬರಬೇಕು ಎಂದರು. ಅಲ್ಲದೇ ಸಂಘಟನೆಯಿಂದ ಭ್ರಷ್ಟರೇ ಭಾರತ ಬಿಟ್ಟು ತೊಲಗಿ ಆಂದೋಲನ ಆರಂಭಿಸಲಾಗಿದೆ ಸಂಘಟನೆಗಳು ಪ್ರಧಾನಮಂತ್ರಿ, ರಕ್ಷಣಾ ಸಚಿವೆ, ಹಣಕಾಸು ಸಚಿವೆ, ಕಾನೂನ ಸಚಿವರು ಪಾರದರ್ಶಕವಾಗಿ ಹೊರಬರುವಂತೆ ಆಗ್ರಹಿಸಿದ್ದಾರೆ ಎಂದರು….!
bigtvnews | Hubli Dharwad News | Kannada News | Karnataka News Hubli News | News In Hubli | Local news





