ಕಳೆದ ಮೂರು ತಿಂಗಳಿಂದ ಬತ್ತಿ ಹೊದ ಕೃಷ್ಣಾ ನದಿ… ಇನ್ನೊಂದು ಕಡೆ ಜನಿ ನೀರಿಗೂ ತತ್ವಾರ… ನೀರಿಗಾಗಿ ಅಲೆಯುತ್ತಿರುವ ಜನ ಮತ್ತು ಜಾನುವಾರು…ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆ ಗಳು…ಇವುಗಳ ನಡುವೆಕೃಷ್ಣಾ ನದಿಗೆ ಕೂಡಲೇ ನೀರು ಹರಿಸಲು ಆಗ್ರಹಿಸಿ ಸ್ವಯಮ್ ಘೋಷಿತ ಸ್ವಾಮೀಜಿ ಒಬ್ಬರು ಮುಳ್ಳಿನ ಮರ ಏರಿದ್ದಾರೆ ಅರೆ ಅದೆಲ್ಲಿ ಅಂತಿರಾ ಈ ಸ್ಟೋರಿ ನೋಡಿ…..ಹೀಗೆ ತಂಡೋಪ ತಂಡವಾಗಿ ನಿಬ್ಬೆರಗಾಗಿ ನೋಡುತ್ತ ನೀಮತಿರುವ ಜನ… ಇನ್ನೊಂದು ಕಡೆ ಮುಳ್ಳಿನ ಮರ ಏರಿ ಉಪವಾಸ ಮಲಗಿದ ಸ್ವಾಮಿಜಿ ಹೌದು ಇಂತಹದ್ದೊಂದು ದೃಷ್ಯ ಕಂಡುಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ…ಲೋಕ ಕಲ್ಯಾಣದ ಹೆಸರಿನಲ್ಲಿ ಮುಳ್ಳು ಕಂಟಿಯ ಮೇಲೆ ಮಲಗಿದ ಸ್ವಾಮೀಜಿ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಸುರೇಶ್ ಮಹರಾಜ್ ಎಂದು ಗುರುತಿಸಲಾಗಿದ್ದು ಜನ ಮರುಳೋ ಜಾತ್ರೆ ಮರುಳೋ ಅನ್ನುವ ಹಾಗೆ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಸ್ವಾಮೀಜಿ ದರ್ಶನ ಪಡೆಯುತ್ತಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





