Breaking News

ಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟ ADGP

ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುವ ಪೋಲೀಸ್ ಹೆಡ್ ಕಾನ್ಸ್ ಟೇಬಲ್ಚಂದ್ರಕಾಂತ್ ಹುಟ್ಗಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ADGP ಭಾಸ್ಕರ್ ರಾವ್ ಕರೆಸಿಕೊಂಡು ಅವರಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟರು. ಅಷ್ಟಕ್ಕೂ ಈ ರೀತಿ ಗಾಯನ ನುಡಿಸಲು ಆರಂಭಿಸಿದ್ದದು, ಅದು ಚುನಾವಣಾ ಕರ್ತವ್ಯಕ್ಕೆಂದು ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಲ್ಲಿ ಒಂದಾದ ದತ್ತಪೀಠಕ್ಕೆ ಭದ್ರತೆಗೆ ತೆರಳಬೇಕಿತ್ತು. ಕರ್ತವ್ಯದಲ್ಲಿದ್ದಾಗ ನಾಲ್ಕೈದು ಗಂಟೆ ಒಂದೇ ಕಡೆ ಕುಳಿತುಕೊಳ್ಳಬೇಕಿತ್ತು. ಆಗ ಸುಮ್ಮನೆ ಕುಳಿತುಕೊಳ್ಳಲು ಚಂದ್ರಕಾಂತ ಎಸ್‌.ಹುಟಗಿ ಅವರಿಗೆ ಬೇಸರ ಮೂಡಿಸುತ್ತಿತ್ತಂತೆ. ಈ ಸಂದರ್ಭದಲ್ಲಿ ಅವರ ಕೈನಲ್ಲಿ ಹಿಡಿದಿದ್ದ ಫೈಬರ್‌ ಲಾಠಿಯೇ ಕೊಳಲಿನಂತೆ ಕಾಣಿಸಿದೆ. ಕರ್ತವ್ಯದಲ್ಲಿ ಕೊಳಲು ಹಿಡಿದು ಹೋಗಲು ಅವಕಾಶ ಇರಲಿಲ್ಲ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಹುಟಗಿ ಫೈಬರ್‌ ಲಾಠಿಯೊಳಗೆ ಟೊಳ್ಳಾಗಿರುವುದು ಅರಿತಿದ್ದರೂ, ಮನೆಗೆ ಬಂದು ಆ ಲಾಠಿಗೆ ಡ್ರಿಲ್‌ನಿಂದ ರಂಧ್ರ ಕೊರೆಯಲು ಮುಂದಾದರು. ಹೀಗೆ ಮಾಡುವಾಗ ಆ ಲಾಠಿ ಮುರಿಯಿತಾದರೂ ಪ್ರಯತ್ನ ಬಿಡದೆ ಇನ್ನೊಂದು ಲಾಠಿ ಖರೀದಿಸಿ ಮತ್ತೆ ಪ್ರಯತ್ನ ಮುಂದುವರಿಸಿದರು. ಲಾಠಿಯನ್ನು ಕೊಳಲನ್ನಾಗಿಸುವಲ್ಲಿ ಯಶಸ್ವಿಯೂ ಆದರು. ಇವರ ಸಾಧನೆಯೇ ಹಿರಿಯ ಅಧಿಕಾರಿಗಳಿಗೂ ಖುಷಿಯಾಗಿದ್ದು , ಲಾಟಿಯ ಬಗ್ಗೆ ಗೇಲಿ ಮಾಡುತ್ತಿದ್ದವರಿಗೆ ಗಾಯನವೂ ಒಂದು ಉತ್ತಮ ಪಾಠ ಕಳಿಸಿದೆ.

Share News

About admin

Check Also

Karnataka Police: ಇನ್ನು ಶಾಸಕರ ‘ಮಿನಿಟ್’ಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಗೃಹ ಇಲಾಖೆಯ ಬಿಗ್ ಸರ್ಜರಿ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ.. ರಾಜಕೀಯ ನಾಯಕರ ಕೈಗೊಂಬೆ ಇನ್ಸ್‌ಪೆಕ್ಟರ್‌ಗಳಿಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಸರ್ಜರಿ..! ಶಾಸಕರ …

Leave a Reply

Your email address will not be published. Required fields are marked *