ಧಾರವಾಡ : ಬಿಜೆಪಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಬರಪುರ ಗ್ಯಾರಂಟಿಗಳ ಮೂಲಕ ಜನ ಮನ್ನಣೆ ಗಳಿಸುತ್ತಾ ರಾಜ್ಯಬಾ(ಭಾ)ರ ಮಾಡುತ್ತಿದೆ ಆದರೆ ಧಾರವಾಡ ಜಿಲ್ಲೆಯ ಆಯಕಟ್ಟಿನ ಹುದ್ದೆಗಳ ಆಯ್ಕೆಯ ವಿಚಾರದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿರುವುದು ಸ್ಪಷ್ಟವಾಗಿದೆ ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರುಗಳ ಕಿತ್ತಾಟ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಜೆಪಿ ಆಡಳಿತ ಅವಧಿಯಲ್ಲಿ ಇದ್ದ ಕೆಲ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಅಲ್ಲಿ ಬೇರೆ ಅಧಿಕಾರಿಗಳನ್ನು ತರಬೇಕು ಎನ್ನುವುದು ವಾಡಿಕೆ ಅದರಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನ್ ಎಕ್ಸಿಕ್ಯೂಟಿವ್ ಪೋಸ್ಟ್ ನಲ್ಲಿದ್ದ ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗದ ಅಧಿಕಾರಿಗಳು ಈಗಲಾದರೂ ಎಕ್ಸಿಕ್ಯೂಟಿವ್ಪೋ

ಸ್ಟ್ ಗೆ ಬರ್ತಾರೆ ಅಂತ ಭಾವಿಸಲಾಗಿತ್ತು ಆದರೆ ಇದಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಅಡ್ಡಗಾಲು ಹಾಕುತ್ತಿರುವುದು ನಡೆಯುತ್ತಿದೆಕಿಮ್ಸ್ ನಿರ್ದೇಶಕರ ಹುದ್ದೆ,ಕಿಮ್ಸ್ ಸೂಪರಿಡೆಂಟ್ ಹುದ್ದೆ ಹಾಗೂ ಜಿಲ್ಲೆಯ ಸಹಾಯಕ ಆಯುಕ್ತರ ಹುದ್ದೆಗೆ ಕೆಲ ಅಲ್ಪ ಸಂಖ್ಯಾತ ಅಧಿಕಾರಿಗಳನ್ನು ನೇಮಿಸಬೇಕು ಅಂತ ಸ್ಥಳೀಯ ಅಲ್ಪ ಸಂಖ್ಯಾತ ಮುಖಂಡರು ಒತ್ತಾಸೆ ತೋರಿದ್ದರು ಇದಕ್ಕೆ ಶಾಸಕದ್ವಯರು ಮುಂದೆ ಲೆಟರ್ ನೀಡುವುದು ಮತ್ತೆ ಹಿಂದೆ ಹೊಸಬರು ಬೇಡ ಬಿಜೆಪಿ ಸರ್ಕಾರದಲ್ಲಿ ಇರುವ ಅಧಿಕಾರಿಗಳೇ ನಮಗೆ ಮುಂದುವರೆಯಬೇಕು ಅಂತ ಸಚಿವರ ಬಳಿ ಲಾಬಿ ನಡೆಸಿದ್ದಾರೆ ಶಾಸಕರ ಈ ದ್ವಿಗುಣ ನೀತಿಗೆ ಇಂಗು ತಿಂದು ಮಂಗನ ರೀತಿ ಆಗಿರುವ ಅಲ್ಪ ಸಂಖ್ಯಾತ ಮುಖಂಡರು ತಾವು ಶಿಪಾರಸ್ಸು ಮಾಡಬೇಕೆ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದಾರೆ, ಏನ್ ಆಗಲಿ ಅಲ್ಪ ಸಂಖ್ಯಾತರ ಮತಗಳಿಂದಲೇ ಶಾಸಕ ಭಾಗ್ಯ ಪಡೆದಿರುವ ನಾಯಕರು ಸಮುದಾಯವನ್ನು ಕದ್ದು ಮುಚ್ಚಿ ಹತ್ತಿಕ್ಕುವ ಕೆಲಸ ಬಿಟ್ಟು ಪ್ರಾಮಾಣಿಕವಾಗಿ ನಿಂತುಕೊಳ್ಳುವುದು ಒಳಿತು ಎನ್ನುವುದು ಬಿಗ್ ಟಿವಿ ನ್ಯೂಸ್ ಆಶಯ
bigtvnews | Hubli Dharwad News | Kannada News | Karnataka News Hubli News | News In Hubli | Local news

