ಚಾಮರಾಜನಗರ ಜಿಲ್ಲೆಯಾಗಲು ನನ್ನ ಶ್ರಮ ಅಪಾರ ಇದು ಹಿಂದುಳಿದ ಗಡಿಪ್ರದೇಶವಾಗಿದ್ದು, ಇನ್ನೂ ಸಾಕಷ್ಟು ಅಭಿವೃದ್ದಿ ಕಾಣಬೇಕಾಗಿದೆ ಅದಕ್ಕಾಗಿ ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಒಂದು ಪ್ಯಾಕೇಜ್ ನೀಡಬೇಕು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದಿಲ್ಲಿ ಆಗ್ರಹಿಸಿದರು.ಚಾಮರಾಜನಗರಕ್ಕೆ ನೀರು ತರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವಾಗ ಭೀಕರ ಬರಗಾಲ ಉಂಟಾಗಿದ್ದು ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣಕ್ಕೆ ಪ್ರತಿನಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಈ ಎಲ್ಲಾ ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಾಟಾಳ್ ನಾಗರಾಜ್ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್, ನನ್ನ ಲೆಕ್ಕಾಚಾರದ ಪ್ರಕಾರ ಮಧ್ಯಂತರ ಚುನಾವಣೆ ಬರುತ್ತೆ, ಈ ಬಗ್ಗೆ ಬಹಳ ಅನುಭವಿ ರಾಜಕಾರಣಿ ದೇವೇಗೌಡರೇ ಮಾತನಾಡಿದ್ದಾರೆ. ಇವರು ಪ್ರಧಾನಿಯಾಗಿದ್ದಂತಹವರು ಸೋಲಬಾರದಿತ್ತು ಆದ್ರೆ ಸೋತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕಾಂಗ್ರೆಸ್ – ಜೆಡಿಎಸ್ ನಡುವೆ ಒಳಗೊಳಗೆ ಯುದ್ಧ ನಡೆಯುತ್ತಿದೆ. ಬಿಜೆಪಿಯವರು ಬಹಳ ಪರಮ ಪವಿತ್ರ ಅಂತೇನಿಲ್ಲ, ಅವರು ಆಪರೇಷನ್ ಕಮಲ ಮಾಡುವುದು ಸರಿಯಲ್ಲ ಎಂದ ಅವರು, ಆಪರೇಷನ್ ಅನ್ನೋದೆ ಡೇಂಜರ್, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷ ಆಗ್ಲಿ, ಈ ರೀತಿ ಮಾಡಬಾರದು ಎಂದರು.ಪಕ್ಷಾಂತರಿಗಳು ಜೀವನ್ಪರಿಯಂತ ಚುನಾವಣೆಗೆ ನಿಲ್ಲಬಾರದು ಇಂತಹವರಿಂದ ಸರ್ಕಾರ ಸುಭದ್ರವಾಗಿರುವುದಿಲ್ಲ. ಸರ್ಕಾರದೋಳಗೆ ನಡೆಯುತ್ತಿರುವಂತಹ ವ್ಯಾಜ್ಯ, ಮಧ್ಯಂತರ ಚುನಾವಣೆಗೆ ದಾರಿಮಾಡಿಕೊಡುತ್ತಿದೆ ಎಂದು ಹೇಳಿದರು.ಒಂದು ವರ್ಷ ಸರ್ಕಾರ ನಡೆಸುವುದು ಕಷ್ಟವಾಗಿದ್ದು,ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸರ್ಕಾರ ನಡೆಸಿದ್ರು, ಆದ್ರೆ ಸಿದ್ದರಾಮಯ್ಯರವರ ಅವಶ್ಯಕತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್- ಜೆಡಿಎಸ್ ನ ಚರ್ಚೆಯಿಂದ, ಮಧ್ಯಂತರ ಚುನಾವಣೆ ಬರುತ್ತೆ ಎಂದು ವಾಟಾಳ್ ನಾಗರಾಜ್ ಭವಿಷ್ಯ ನುಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





