Breaking News

ಆನ್ ಲೈನ್ ಜೂಜಾಟ :ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನಾಪ್


ಹುಬ್ಬಳ್ಳಿ: ಆನ್ ಲೈನ್ ಜೂಜಾಟದ ಆಪ್ ಗಳು ಹೆಚ್ಚಾಗಿವೆ. ಹುಬ್ಬಳ್ಳಿ 21 ವರ್ಷದ ಯುವಕ ಗಿಲಾವರ್ ಎಂಬುವಾತನಿಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್ ಎಂಬುವಾತನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ.

ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಗಿವಾವರ್ ಗೆ ಆನ್ ಲೈನ್ ಜೂಜಾಟವಾಡುವ ಅಭ್ಯಾಸವಿದ್ದು, ಹಲವಾರು ದಿನಗಳಿಂದ ಆನ್ ಲೈನ್ ಕ್ಯಾಸಿನೋ ಜೂಜನನ್ನು ಆಡುತ್ತಿದ್ದ. ಕಳೆದ ತಿಂಗಳು ಗಿಲಾವರ್ ಅದೃಷ್ಟ ಕುಲಾಯಿಸಿ ಬರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಆದರೆ ವಿಪರ್ಯಾಸವೆಂದರೆ ಹಣವನ್ನು ಬಿಡಿಸಿಕೊಳ್ಳಲು ಗಿಲಾವರ್ ಗೆ ಬ್ಯಾಂಕ್ ಖಾತೆ ಇರಲಿಲ್ಲ.ಹೀಗಾಗಿ ಆತನ ಸ್ನೇಹಿತ ಗರೀಬ್ ಹಣ ತೆಗೆಯಲು ಸಹಾಯ ಕೇಳಿದ್ದು, ಗರೀಬ್ ತನ್ನ ಇನ್ನೊಬ್ಬ ಸ್ನೇಹಿತ ಮಹಮ್ಮದ್ ಎಂಬಾತನಗೆ ವಿಷಯ ತಿಳಿಸಿ, ಆತನ ಖಾತೆಗೆ 2 ಕೋಟಿ ಹಣ ವರ್ಗಾವಣೆ ಮಾಡಿಸಿದ್ದಾನೆ. ಹಣ ವರ್ಗಾವಣಾಗುತ್ತಿದ್ದಂತೆ, ಗರೀಬ್, ಗಿಲಾವರ್ ಮತ್ತು ಮಹಮ್ಮದ್ ಫುಲ್ ಮಜಾ ಮಾಡಿದ್ದಾರೆ.

ಇದು ಕಳೆದ ಸ್ವಲ್ಪ ದಿನವಾದ ಮೇಲೆ ಮಹಮ್ಮದ್ ಗೆ ದುರಾಸೆ ಹುಟ್ಟಿಕೊಂಡಿದೆ. ಇವರ ಬಳಿ ಇನ್ನೂ ಹಣವಿದೆ ಹೇಗಾದರೂ ಮಾಡಿ ಕಿತ್ತಕೊಳ್ಳಬೇಕೆಂದು ಆಲೋಚಿಸಿ, ಗಿಲಾವರ್ ಕಿಡ್ನಾಪ್ ಮಾಡುವ ಪ್ಲಾನ್ ಮಾಡಿದ್ದಾನೆ, ಕರೆ ಮಿಟ್ ಮಾಡುವಂತೆ ಕೇಳಿದ್ದಾನೆ. ಆದರೆ ಗಿಲಾವರ್ ಆತನ ಊರಿಗೆ ತೆರಳಿರುವುದಾಗಿ ತಿಳಿಸದ್ದಾನೆ. ಆಗ ಆತನ ಸ್ನೇಹಿತ ಗರೀಬ್ ಕಾಲ್ ಮಾಡಿ ಮಿಟ್ ಆಗುವುದಾಗಿ ತಿಳಿಸಿದ್ದಾನೆ, ಗಿರೀಬ್ ಕಾಲೇಜು ಬಳಿಗೆ ಬರಲು ತಿಳಿಸಿದ್ದಾನೆ. ಈ ತಿಂಗಳ 6 ರಂದು ಸಂಜೆ ಬಿವಿಬಿ ಕಾಲೇಜು ಬಳಿಗೆ ತೆರಳಿದ, ಮಹಮ್ಮದ್ ಮತ್ತು ಆತನ ಸ್ನೇಹಿತರು ಕಾರ್ ನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಗರೀಬ್ ನಿಂದ ಗಿಲಾವರ್ ಗೆ ಕಾಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಇದರಿಂದಾಗಿ ಗಾಬರಿಗೊಂಡ ಗಿಲಾವರ್, ಗರೀಬ್ ಮನೆಗೆ ಕಾಲ್ ಮಾಡಿ ತಿಳಿಸಿದ್ದಾನೆ. ಕೂಡಲೇ ಮನೆಯವರು ವಿವಿಧ ಕಡೆ ಗರೀಬ್ನನು ಹುಡುಕಿದ್ದಾರೆ. ಬಳಿಕ ಬೆಂಡಿಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.ಇನ್ನೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಟ್ಟು ‌ಐದು ತಂಡಗಳನ್ನು ರಚಿಸಿಕೊಂಡು, ಶೀಘ್ರವಾಗಿ ಕಾರ್ಯೋನ್ಮುಕರಾಗಿದ್ದು, ಮೊಬೈಲ್ ನೆಟ್ವರ್ಕ್ ಆಧರಿಸಿ ಕಿಡ್ನಾಪ್ ಗರೀಬ್ ಬಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ, ಮೊದಲಿಗೆ ಗರೀಬ್ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಕಿಡ್ನಾಪ್ ಮಾಡಿದ್ದ ಮಹಮ್ಮದ್ ಮತ್ತು ಆತನ ಸ್ನೇಹಿತರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆ ಒಳಪಡಿಸಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *