Breaking News

ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ..! ಒಂಟಿ ವೃದ್ಧೆಯರ ಮನೆಗೆ ಬೆಳಕು ತಂದ ಕಾನ್ಸ್ಟೇಬಲ್..

50 ವರ್ಷ ಕತ್ತಲೆಯ ಬದುಕು… ಪೊಲೀಸರ ಮಾನವೀಯತೆಯಿಂದ ವೃದ್ಧೆಯರಿಗೆ ವಿದ್ಯುತ್ ಬೆಳಕು‘

ಆಸರೆ’ ಕಾರ್ಯಕ್ರಮದ ನಿಜವಾದ ಅರ್ಥ: ವೃದ್ಧೆಯರ ಬದುಕು ಬೆಳಗಿಸಿದ ಕಾನ್ಸ್ಟೇಬಲ್ ಕುಮಾರಸ್ವಾಮಿ

ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ: ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್ ಕುಮಾರಸ್ವಾಮಿ…

ಚಾಮರಾಜನಗರ (ಮಾ.16): ಪೊಲೀಸ್ ಅಂದ್ರೆ ಕೇವಲ ಕಾನೂನು ಜಾರಿ ಮಾಡುವ ಇಲಾಖೆ ಮಾತ್ರವಲ್ಲ, ಸಮಾಜದ ಕಷ್ಟದಲ್ಲಿ ನಿಂತು ನೆರವಾಗುವ ಮಾನವೀಯ ಮುಖವೂ ಹೌದು ಎಂಬುದನ್ನು ಚಾಮರಾಜನಗರದ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ತಮ್ಮ ಕೃತಿಯಿಂದ ತೋರಿಸಿದ್ದಾರೆ…

ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಜಾರಿಗೊಳಿಸಿರುವ ‘ಆಸರೆ’ ಕಾರ್ಯಕ್ರಮದ ಭಾಗವಾಗಿ ಮಾಹಿತಿ ಸಂಗ್ರಹಿಸಲು ಹೋದ ವೇಳೆ, ಎರಡು ಬಡ ವೃದ್ಧೆಯರು ಕತ್ತಲೆಯಲ್ಲೇ ಬದುಕು ಸಾಗಿಸುತ್ತಿರುವ ದುಸ್ಥಿತಿ ಕಂಡು ಕಾನ್ಸ್ಟೇಬಲ್ ಕುಮಾರಸ್ವಾಮಿ ಮನಸ್ಸು ಮರುಗಿತು…

ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ, ವಿದ್ಯುತ್ ಸಂಪರ್ಕವೇ ಇಲ್ಲದೆ ಕಳೆದ ಐವತ್ತು–ಅರವತ್ತು ವರ್ಷಗಳಿಂದ ಸೀಮೆಎಣ್ಣೆ ದೀಪ ಹಾಗೂ ಮೇಣದ ಬತ್ತಿಯ ಬೆಳಕಿನಲ್ಲೇ ರಾತ್ರಿ ಕಳೆಯುತ್ತಿದ್ದ ಮಹದೇವಮ್ಮ ಮತ್ತು ರಾಜಮ್ಮ ಅವರ ಪರಿಸ್ಥಿತಿ ಕಂಡ ಅವರು, ಕ್ಷಣಮಾತ್ರವೂ ವಿಳಂಬ ಮಾಡದೆ ತಮ್ಮ ಸ್ವಂತ ಖರ್ಚಿನಲ್ಲಿ ಅವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಬೆಳಕು ತಂದಿದ್ದಾರೆ…

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಇಬ್ಬರು ಹಿರಿಯ ಮಹಿಳೆಯರ ಬದುಕಿನಲ್ಲಿ ಇದೀಗ ವಿದ್ಯುತ್ ಬೆಳಕು ಮಾತ್ರವಲ್ಲ, ಭರವಸೆಯ ಹೊಸ ಕಿರಣ ಮೂಡಿದೆ. ಕತ್ತಲೆಯಲ್ಲಿದ್ದ ಅವರ ಬದುಕಿಗೆ ಬೆಳಕು ತುಂಬಿದ ಕಾನ್ಸ್ಟೇಬಲ್ ಕುಮಾರಸ್ವಾಮಿ ಅವರ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…

ಹಿರಿಯ ನಾಗರಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಜಾರಿಗೊಳಿಸಿರುವ ‘ಆಸರೆ’ ಕಾರ್ಯಕ್ರಮದ ಸಾರ್ಥಕತೆಯನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ. “ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ” ಎಂಬ ಮಾತಿಗೆ ಜೀವ ತುಂಬುವಂತ ಕೆಲಸವನ್ನು ಕಾನ್ಸ್ಟೇಬಲ್ ಕುಮಾರಸ್ವಾಮಿ ಮಾಡಿದ್ದಾರೆ ಎಂಬ ಪ್ರಶಂಸೆ ಎಲ್ಲೆಡೆಯಿಂದ ಕೇಳಿಬರುತ್ತಿದೆ…

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *