Breaking News

ಡಿಕೆಶಿ ವಿರುದ್ದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ವ್ಯಂಗ್ಯ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಡಿಕೆಶಿ ವಿರುದ್ದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ವ್ಯಂಗ್ಯ ಮಾಡಿದ್ದಾರೆ. ಒಣಗಿದ ನದಿ ನೋಡಲು ಸಚಿವ ಡಿಕೆಶಿ ಕೃಷ್ಣಾ ತೀರದತ್ತ ಪ್ರವಾಸ ಕೈಗೊಂಡಿದ್ದಾರೆ. ಕೃಷ್ಣಾ ತೀರಕ್ಕೆ ಆಗಮಿಸಲಿರುವ ಸಚಿವ ಡಿಕೆಶಿ ಜತೆಗೆ ನಾನು ಸಹ ಪ್ರವಾಸ ನಡೆಸಲಿದ್ದೇನೆ. ಒಣಗಿದ ನದಿ ಹೇಗೆ ಕಾಣುತ್ತದೆ ಎಂಬುವುದನ್ನು ನೋಡಲು ಸಚಿವರು ಬರುತ್ತಿದ್ದಾರೆ. ಅವರ ಈ ಪ್ರವಾಸ ಜನರ ಸಮಸ್ಯೆ ಆಲಿಸುವುದಕ್ಕೆ ಅಲ್ಲ. ನೀರಿನ ಹಾಹಾಕಾರದಿಂದ ಕೃಷ್ಣಾ ತೀರದ ಜನಜೀವನ ಹದಗೆಟ್ಟಿದೆ. ಇಷ್ಟು ದಿನ ಬಾರದ ಸಚಿವರು ಈಗ ಬಂರುತ್ತಿದ್ದಾರೆ ಎಂದು ಕೋರೆ ಅಸಮಾಧಾನ ವ್ಯಕ್ತಪಡಿಸಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *