Breaking News

ವಾಸ್ತವ್ಯ ಮಾಡಿರುವ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಹಾಕಿದ್ರು.

ಸಿಎಂ ಅವರು ಚಂಡರಕಿ ಗ್ರಾಮದ ಶತಮಾನದ ಶಾಲೆಯಲ್ಲಿ ವಾಸ್ತವ್ಯ ಮಾಡಿರುವ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಹಾಕಿದ್ರು. ಇದ್ದಕ್ಕು ಮುನ್ನ ಸಿಎಂ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸುದ್ದಿ ಹಾಗೂ ರಾಜಕೀಯ ಸುದ್ದಿಗಳು ಓದಿದ್ದರು.ಸಚಿವ ಸಾರಾ ಮಹೇಶ್,ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ,ಶಾಸಕ ನಾಗನಗೌಡ ಕಂದಕೂರ ಅವರು ಹಾಗೂ ಅಧಿಕಾರಿಗಳ ಜೊತೆ ಜಿಲ್ಲೆಯ ಪ್ರಮುಖ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು.ಖಾಸಾಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಖಾಸಾಮಠದ ಶ್ರೀಗಳ ಆಶೀರ್ವಾದ ಪಡೆದರು. ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸಿ ವಾಪಸ್ ಬೆಂಗಳೂರು ಗೆ ತೆರಳುವಾಗ ಚಂಡರಕಿ ಗ್ರಾಮಸ್ಥರು, ಶಾಲೆ ವಿದ್ಯಾರ್ಥಿಗಳು ಸಿಎಂ ಅವರಿಗೆ ಕೈಮಿಲಾಯಿಸಿ ಪ್ರೀತಿಯಿಂದ ನಾಡ ದೊರೆಗೆ ಬೀಳ್ಕೋಟ್ಟರು. ವಿದ್ಯಾರ್ಥಿಗಳು ಸಿಎಂ ಹೋಗುವಾಗ ಸಿಎಂ ಅವರನ್ನು ಸಿಎಂ ಸರ್ ಎನ್ನುತ್ತಾ ಮಾತನಾಡಿಸಿ ಮಮತೆ ತೊರಿದ್ದು ಕಂಡು ಬಂತು.ಅದೆ ರೀತಿ ಇಂದು ಕೂಡ ಕಲಬುರಗಿ ಜಿಲ್ಲೆಯ ಹೆರೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸುವದು ಮಳೆ ಕಾರಣ ರದ್ದು‌ ಮಾಡಲಾಗಿದೆ. ಜೂಲೈ ತಿಂಗಳಲ್ಲಿ ಮತ್ತೆ ಗ್ರಾಮ ವಾಸ್ತವ್ಯ ಮಾಡುತ್ತೆನೆ ಎಂದರು. ಗ್ರಾಮ ವಾಸ್ತವ್ಯ ಮೂಲಕ ಇನ್ನು ಮುಂದೆ ಸಿಎಂ ಹಳ್ಳಿಗಳತ್ತ ಅಭಿವೃದ್ಧಿ ಚಿತ್ತ ಬೆಳೆಸಿದ್ದು‌ ಮೆಚ್ಚುವಂತಾಗಿದೆ.

Share News

About admin

Check Also

ಯಾದಗಿರಿ: ಅಂಗನವಾಡಿ ಸಹಾಯಕಿ ಸಿಡಿಪಿಓ ಲೋಕಾಯುಕ್ತ ಬಲೆಗೆ.!

ಅಂಗನವಾಡಿ ಸಹಾಯಕಿ ಗೈರು ಹಾಜರು ಸಕ್ರಮಗೊಳಿಸಲು ಒಂದು ಲಕ್ಷ ರೂಪಾಯಿ ಬೇಡಿಕೆ ನೀಡಿದ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಬಸ್ಸು ನಿಲ್ದಾಣದ …

Leave a Reply

Your email address will not be published. Required fields are marked *