ನಗರದ ಮಾತಾ ಮಾಣಿಕೇಶ್ವರಿ ನಗರದ ಸಹೋದರಿಗೆ ಮನೆಗೆ ಪಟೇಲ್ ಭೇಟಿ ನೀಡುವಾಗ ಏಕಾಏಕಿ ಜೆಸ್ಕಾಂ ವೈರ್ ತುಂಡರಿಸಿ ಬಿದ್ದಿದೆ.ಇದನ್ನು ತಿಳಿಯದೇ ಬೈಕ್ ಸವಾರ ಹೋಗಿದ್ದು, ಆತನ ಮೇಲೆ ಬಿದ್ದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಭೇಟಿ ನೀಡಿದ್ದಾರೆ. ಯುವಕ ಹೆಲ್ಮೆಟ್ ಧರಿಸಿದ್ದು, ತುಂಡರಿಸಿದ ವೈರ್ ಕಾಣದೇ ಇರುವ ಕಾರಣ ಅವಘಡ ಸಂಭವಿಸಿದೆ’ ಎಂದು ಅವರು ಮಾಹಿತಿ ನೀಡಿದರು.ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ನಿವಾಸಿ ಖಾಜಾ ಪಟೇಲ್ (21) ಮೃತಪಟ್ಟವರು.
bigtvnews | Hubli Dharwad News | Kannada News | Karnataka News Hubli News | News In Hubli | Local news

