ಹುಬ್ಬಳ್ಳಿ: ಕಾರ್ಯನಿರತ ಶುಶ್ರೂಷಾ ಸಿಬ್ಬಂದಿಯ ಮೇಲೆ ಹಲ್ಲೆಯನ್ನು ಖಂಡಿಸಿ ಕರ್ನಾಟಕ ಸರ್ಕಾರಿ ಶುಶ್ರೂಷಾ ನೌಕರರ ಸಂಘ ಧಾರವಾಡ ಘಟಕದ ವತಿಯಿಂದ ಇಂದು ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎದುರಿಗೆ ಪ್ರತಿಭಟನೆ ನಡೆಸಿತು.ಕಿಮ್ಸ್ ನ ಸ್ಟಾಫ್ ನರ್ಸ್ ರೇವಣಸಿದ್ದಪ್ಪ ಜೆ.ಬಿ. ಎಂಬುವರು ಕಾರ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಅಮರಗೋಳದ ನಿವಾಸಿ ಸಂತೋಷ, ಅಶೋಕ, ಅಥಣಿ ಎಂಬ ಮೂವರು ಹಲ್ಲೇ ತನ್ನ ಗೆಳೆಯನಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಭಾನುವಾರ ತಡರಾತ್ರಿ ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿರುವ ಕರ್ನಾಟಕ ಸರ್ಕಾರಿ ಶುಶ್ರೂಷಾ ನೌಕರರ ಸಂಘ ಪ್ರತಿಭಟನೆಯನ್ನು ಮಾಡಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನಾಕಾರರು ಕಾರ್ಯನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಬೇಕು. ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಗಿಸಬೇಕು ಅಲ್ಲದೇ ಶೀಘ್ರವಾಗಿ ತನಿಖೆ ಕೈಗೊಂಡು ಹಲ್ಲೆಗೆ ಒಳಗಾಗಿರುವ ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ಸುನೀತಾ ನಾಯ್ಕ,ಎಚ್.ವಿ.ರಾಮದುರ್ಗ, ಶೀಲಾ ಮುರ್ತೋಟ,ಗಿರಿಜಾ ಜಾಡರ, ಅನ್ನಪೂರ್ಣ ಘಂಟಿ, ಸೂರ್ಯಕಲಾ ಜೆ., ಶ್ರೀಧರ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





