Breaking News

ಪೊಲೀಸ್ ಇಲಾಖೆಯಲ್ಲಿ ಗೊಂದಲ: ಪ್ರತಿಭಟನೆ ಬೆನ್ನಲ್ಲೇ ಇನ್ಸಪೆಕ್ಟರ್ ಅಮಾನತ್ತು – ನ್ಯಾಯವೇ ಅಥವಾ ಒತ್ತಡವೇ..?

ವಿದ್ಯಾರ್ಥಿ ಸಾವು ಪ್ರಕರಣ ತೀವ್ರ: ಇನ್ಸಪೆಕ್ಟರ್ ಅಮಾನತ್ತು, ದಯಾನಂದ ಶೇಗುಣಸಿ ಇನ್ಚಾರ್ಜ್!

ಒಳ್ಳೆಯವರಿಗೆ ಕಾಲವಲ್ಲ! ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಅಮಾನತ್ತು…

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ತೀವ್ರಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆಯನ್ನು ಸುತ್ತುವರಿದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂಬ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ…

ಈ ಪ್ರಕರಣದಲ್ಲಿ ಈಗಾಗಲೇ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದ್ದು, ಇದೀಗ ಯಾವುದೇ ತಪ್ಪು ಮಾಡಿಲ್ಲ ಎನ್ನಲಾದ ಇನ್ಸಪೆಕ್ಟರ್ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಚ್ಚರಿ ಮೂಡಿಸಿದೆ. “ಒಬ್ಬ ಸಿಬ್ಬಂದಿ ಮಾಡಿದ ತಪ್ಪಿಗೆ ಇತರರು ಯಾಕೆ ಬಲಿಯಾಗಬೇಕು..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ…

ಬಿಎಸ್ಸಿ ವಿದ್ಯಾರ್ಥಿಯೋರ್ವನಿಗೆ ಪೊಲೀಸರು ಹಣಕ್ಕಾಗಿ ಕಿರುಕುಳ ನೀಡಿದರು ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಮಾನಸಿಕವಾಗಿ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಘಟನೆಯ ಬಳಿಕ ಸಾರ್ವಜನಿಕ ಆಕ್ರೋಶ ಜೋರಾಗಿ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆದಿವೆ…

ಪ್ರತಿಭಟನೆ ಮತ್ತು ಒತ್ತಡದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿರುವರಾ ಅಥವಾ ನಿಜವಾದ ತನಿಖೆಯ ಆಧಾರದ ಮೇಲೆ ನಿರ್ಧಾರಗಳಾಗುತ್ತಿವೆಯಾ ಎಂಬ ಅನುಮಾನಗಳು ಮೂಡಿವೆ. ವಿಶೇಷವಾಗಿ, ಉತ್ತಮ ಸೇವೆಗೆ ರಾಷ್ಟ್ರಪತಿ ಪದಕ ಪಡೆದ ಅಧಿಕಾರಿಯೇ ಅಮಾನತ್ತು ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದೆ…

ಇದೀಗ ವಿದ್ಯಾಗಿರಿ ಠಾಣೆಗೆ ದಯಾನಂದ ಶೇಗುಣಸಿ ಅವರನ್ನು ಇನ್ಚಾರ್ಜ್ ಆಗಿ ನೇಮಕ ಮಾಡಲಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರುವವರೆಗೂ ಇನ್ನಷ್ಟು ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ…

ಈ ಘಟನೆಯ ಮೂಲಕ ಪೊಲೀಸ್ ಇಲಾಖೆಯ ಒಳಾಂಗಣ ವ್ಯವಸ್ಥೆ, ಜವಾಬ್ದಾರಿ ಮತ್ತು ಕ್ರಮಗಳ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

Share News

About Shaikh BigTv

Check Also

ವಿಜಯನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆ – ರುಬ್ಬುಗುಂಡಿನ ಕಲ್ಲಿನಿಂದ ಹೊಡೆದು ಯುವಕನ ಭೀಕರ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿಯ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ …

Leave a Reply

Your email address will not be published. Required fields are marked *