Breaking News

ಮುಸ್ಲಿಂ ಮುಖಂಡರ ಒಗ್ಗಟ್ಟು ಎಲ್ಲಿದೆ..? DCC ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳು… ಕೆಲವೊಂದು ಮುಖಂಡರು ಧೂಳಿಪಟ ಆದ್ರಾ..?

ನಾ ಮುಂದು… ನೀ ಮುಂದು… ಹುದ್ದೆಗಾಗಿ ಪೈಪೋಟಿ; ಮುಸ್ಲಿಂ ಸಮಾಜದ ಕೆಲ ಮುಖಂಡರು ಧೂಳಿಪಟ ಆದ್ರಾ..?

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮುಸ್ಲಿಂ ಸಮಾಜದ ಮುಖಂಡರ ರಾಜಕೀಯ ನಾಯಕತ್ವದ ಬಗ್ಗೆ ಇದೀಗ ಹೊಸ ಚರ್ಚೆ ಶುರುವಾಗಿದೆ….

ಒಂದೆಡೆ ಮುಸ್ಲಿಂ ಸಮಾಜಕ್ಕೆ ಪ್ರಬಲ ಹಾಗೂ ಒಗ್ಗಟ್ಟಿನ ನಾಯಕತ್ವ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಕೆಲವೇ ದಿನಗಳ ಹಿಂದೆ DCC ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ವಿಚಾರದಲ್ಲಿ “ನಾ ಮುಂದು… ನೀ ಮುಂದು…” ಎಂಬಂತೆ 30ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಆಕಾಂಕ್ಷೆ ತೋರಿದ್ದಾರೆ ಎನ್ನಲಾಗಿದೆ…

ಹಾಗಾದರೆ ಪ್ರಶ್ನೆ ಇರುವುದು ಒಂದೇ…

ಇಷ್ಟೊಂದು ಮುಖಂಡರು ಇದ್ದರೂ ಒಗ್ಗಟ್ಟಿನ ನಾಯಕತ್ವ ಏಕೆ ಕಾಣಿಸುತ್ತಿಲ್ಲ?
ಸಮುದಾಯವನ್ನು ಒಟ್ಟಾಗಿ ಮುನ್ನಡೆಸುವ ಒಂದೇ ಒಂದು ನಾಯಕತ್ವ ಏಕೆ ರೂಪುಗೊಳ್ಳುತ್ತಿಲ್ಲ?
ಹುದ್ದೆಗಾಗಿ ಪೈಪೋಟಿ ಇದೆ… ಆದರೆ ಸಮಾಜಕ್ಕಾಗಿ ಒಗ್ಗಟ್ಟು ಎಲ್ಲಿದೆ..?

ಒಂದು ಕಾಲದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲವೊಂದು ಮುಸ್ಲಿಂ ಮುಖಂಡರು ಇಂದು ರಾಜಕೀಯವಾಗಿ ಧೂಳಿಪಟ ಆದ್ರಾ..? ಅವರ ರಾಜಕೀಯ ಪ್ರಭಾವ ಏಕೆ ಕುಸಿಯಿತು? ಅವರನ್ನು ಬದಿಗೊತ್ತಲಾಗಿದೆಯಾ, ಅಥವಾ ತಮ್ಮದೇ ರಾಜಕೀಯ ನಡೆಗಳಿಂದ ಅವರು ಮೂಲೆಗುಂಪಾದ್ರಾ..?

ಇನ್ನೊಂದೆಡೆ, ಹೊಸ ಮುಖಗಳು ನಾಯಕತ್ವಕ್ಕಾಗಿ ಮುಂಚೂಣಿಗೆ ಬರಲು ಪೈಪೋಟಿ ನಡೆಸುತ್ತಿದ್ದಾರೆ…

“ನಾ ಮುಂದು… ನೀ ಮುಂದು…” ಎಂದು ಸ್ಥಾನಕ್ಕಾಗಿ ಮುಂದೆ ಬರುವ ಮುಖಂಡರು, ಸಮಾಜದ ವಿಚಾರ ಬಂದಾಗ ಮಾತ್ರ ಏಕೆ ಒಗ್ಗಟ್ಟಾಗುತ್ತಿಲ್ಲ? ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ…

DCC ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳು ಎನ್ನಲಾಗುತ್ತಿರುವುದು ಒಂದು ಕಡೆ. ಆದರೆ ಮುಸ್ಲಿಂ ಸಮಾಜದ ಒಗ್ಗಟ್ಟಿನ ಧ್ವನಿ ಎಲ್ಲಿದೆ? ಸಮಾಜದ ಪರವಾಗಿ ಒಂದೇ ವೇದಿಕೆಯಲ್ಲಿ ನಿಲ್ಲುವ ನಾಯಕತ್ವ ಎಲ್ಲಿದೆ? ಎಂಬ ಪ್ರಶ್ನೆ ಮತ್ತೊಂದೆಡೆ…

ಹೀಗಾಗಿ ಹುಬ್ಬಳ್ಳಿ-ಧಾರವಾಡದ ಮುಸ್ಲಿಂ ಸಮಾಜದಲ್ಲಿ ಇದೀಗ ಚರ್ಚೆಯಾಗುತ್ತಿರುವ ಪ್ರಶ್ನೆ….

ಮುಖಂಡರು ಸಾಕಷ್ಟಿದ್ದಾರೆ… ಆದರೆ ಒಗ್ಗಟ್ಟಿನ ನಾಯಕತ್ವ ಎಲ್ಲಿದೆ..?
ಹುದ್ದೆಗಾಗಿ ಪೈಪೋಟಿ ಇದೆ… ಸಮಾಜಕ್ಕಾಗಿ ಒಗ್ಗಟ್ಟು ಏಕೆ ಇಲ್ಲ..?
ಕೆಲವೊಂದು ಮುಸ್ಲಿಂ ಮುಖಂಡರು ರಾಜಕೀಯವಾಗಿ ಧೂಳಿಪಟ ಆದ್ರಾ..?
ಹೊಸ ಮುಖಗಳು ನಿಜವಾಗಿಯೂ ಸಮಾಜದ ನಾಯಕತ್ವ ವಹಿಸಿಕೊಳ್ಳುತ್ತಾರಾ..?

ಇದೇ ಈಗ ಹುಬ್ಬಳ್ಳಿ-ಧಾರವಾಡದ ಮುಸ್ಲಿಂ ಸಮಾಜದ ಮುಖಂಡರ ಮುಂದೆ ನಿಂತಿರುವ ದೊಡ್ಡ ಪ್ರಶ್ನೆ.

Share News

About Shaikh BigTv

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *