Breaking News

ಅಲ್ಪ ಸಂಖ್ಯಾತ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ.

ಹುಬ್ಬಳ್ಳಿ, ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ನಿರಂತರ ದೌರ್ಜನ್ಯವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫಗ ಇಂಡಿಯಾ ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ರಾಜ್ಯದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರು, ದಲಿತರ ಮೇಲೆ ಹಲ್ಲೇಗಳಾಗುತ್ತಿದ್ದನ್ನು ಖಂಡಿಸಿ ಘೋಷಣೆ ಕೂಗಿದ ಅವರು, ನಿರಂತರ ದೌರ್ಜನ್ಯಗಳನ್ನು ನೋಡಿದರೆ ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ‌. ಕೂಡಲೇ ರಾಜ್ಯದ ನಾನಾ ಕಡೆಗಳಲ್ಲಿ ಸಂಬಂಧಿಸಿದ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಲ್ಲೇಗೆ ಒಳಗಾದವರಿಗೆ ನ್ಯಾಯ ಒದಗಿಸಬೇಕು. ರಾಜ್ಯದಲ್ಲಿ ಶಾಂತಿ – ಸೌಹಾರ್ದತೆ‌ ಕಾಪಾಡಲು ಜಾತಿ – ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಅಪನಂಬಿಕೆ ಹೋಗಲಾಡಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಮೊಹಮ್ಮದ್ ರಫೀಕ್ ಲಷ್ಕರ್,‌ಉಪಾಧ್ಯಕ್ಷ ಸಮೀರ ಬೇಟಗೇರಿ, ಇರ್ಷಾದ್ ಅಹ್ಮದ ರಿತ್ತಿ, ಅಬ್ದುಲ್ಲಾ ಕುಂಬಳೂರ, ಹಮೀದ ಬೆಂಗಾಲಿ, ರಫೀಕ್ ಬಿಸ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು..

Share News

About admin

Check Also

Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ….. ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ... ಸಾಮನ್ಯ ಜನರು …

Leave a Reply

Your email address will not be published. Required fields are marked *