ಕೋಲಾರ:- ರಸ್ತೆಯಲ್ಲಿ ಬೈಕ್ ವೀಲಿಂಗ್
ಮಾಡುವ ವೇಳೆ ಆಯಾತಪ್ಪಿ ಬಿದ್ದ ಯುವಕ ಮೃತ ಪಟ್ಟಿರುವ ಘಟನೆ ಕೋಲಾರದ
ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ರಸ್ತೆಯಲ್ಲಿ ನಡೆದಿದೆ. ಬೈಕ್
ವೀಲಿಂಗ್ ಮಾಡುವ ವೇಳೆ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ
ಯುವಕ ಸಾವನ್ನಪಿದ್ದಾನೆ. ಪಟ್ಟಣದ ರಹೀಮ್ ಕಾಂಪೌಂಡ್ ನಿವಾಸಿ ತಾಹೀದ್ (23) ಮೃತ ಯುವಕನಾಗಿದ್ದಾನೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





