ಹುಬ್ಬಳ್ಳಿ: ಶಾಲಾ ಹಾಗೂ ಕಾಲೇಜುಗಳಿಗೆ ಹೋಗುತ್ತಿದ್ದ
ಯುವತಿಯರನ್ನು ಚುಡಾಯಿಸುವುದೇ ತಮ್ಮ ನಿತ್ಯ ಕಾಯಕ ಮಾಡಿಕೊಂಡಿದ್ದ ರೋಡ್ ರೋಮಿಯೋ ಗಳಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ವಾಣಿಜ್ಯ ನಗರೀ ಹುಬ್ಬಳ್ಳಿಯ ಕೆಲವು ಕಡೆ ದಿನನಿತ್ಯ ಯುವತಿಯರಿಗೆ ಕಾಟ ಕೊಡುತ್ತಿದ್ದ ಎಂಟು ಮಂದಿ ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಟೂರು ರಸ್ತೆ, ಘಂಟಿಕೇರಿ ಓಣಿ, ನೆಹರೂ ಕಾಲೇಜು, ವೀರಾಪುರ ಓಣಿ ಸೆಟ್ಲ್ಮೆಂಟ್ ಹತ್ತಿರ ಹುಡುಗಿಯರನ್ನು
ಚುಡಾಯಿಸುತ್ತಿದ್ದ ಬಗ್ಗೆ ದೂರು ಬಂದ
ಹಿನ್ನೆಲೆಯಲ್ಲಿ ದಾಳಿ
ಮಾಡಿದ ಚೆನ್ನಮ್ಮ ಪಡೆಯ ಮಹಿಳಾ ಪೊಲೀಸರು ಬೀದಿ ಕಾಮಣ್ಣರನ್ನು ಬಂಧಿಸಿದ್ದಾರೆ. ಬಂಧಿತರು
ತನ್ವಿರ್ ಶಕೀಲ್, ಆರೀಫ್
ಮುಲ್ಲಾ, ತೌಸೀಫ್ ಕುಂದಗೋಳ, ಸಮೀರ್ ಅರಳಿಕಟ್ಟಿ, ಉಮರ್ ಬೇಪಾರಿ, ಉಸ್ಮಾನ ಕರಡಿ ಹಾಗೂ ಉಮರ್ ಫಾರುಕ್ ಕರ್ಜಗಿ
ಎಂಬುವರಾಗಿದ್ದು, ಬಂಧಿತ
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





