Breaking News

ನೀರಿಗಾಗಿ ಬಡಿದಾಟ ಹಲವಾರು ಮಂದಿ ಗಾಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು

ಚಿಂತಾಮಣಿ :ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗಲಾಟೆ ನಡೆದಿದ್ದು ಮಹಿಳೆಯರು ಪುರುಷರು ಮಕ್ಕಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಮುರುಗಮಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕರ್ ಮತ್ತು ಅವರ ಕುಟುಂಬದವರು ಇಂದು ಸಂಜೆ ತಮ್ಮ ಕುಟುಂಬದ ಮೂರು ಮನೆಗಳಿಗಾಗಿ ಮಾತ್ರ ಹೊಸ ನಲ್ಲಿಯನ್ನು ಹಾಕಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ಶಂಕರ್ ಮತ್ತು ಅವರ ಕುಟುಂಬದವರು ಇದನ್ನು ಪ್ರಶ್ನಿಸಿದವರ ಮೇಲೆ ಜಗಳ ತೆಗೆದಿದ್ದಾರೆ ಈ ಸಂದರ್ಭದಲ್ಲಿ ಶಂಕರ್ ಮತ್ತು ಪ್ರಶ್ನಿಸಿದವರ ನಡುವೆ ಮಾತಿನ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಶಂಕರ್ ಮತ್ತು ಕುಟುಂಬದವರ ತಂಡ ಸುಮಾರು ಅದಕ್ಕೂ ಹೆಚ್ಚು ಮಂದಿಯ ಮೇಲೆ ಮಾರಕ ಕಾಯಿಲೆಗಳಿಂದ ಹಲ್ಲೆ ನಡೆಸಿದ್ದಾರೆ ಅಲ್ಲಿ ಇಲ್ಲಿ ತಲೆ ಕೈ ಕಾಲು ಮೈಗೆ ಗಾಯಗಳಾಗಿದ್ದು ಎಲ್ಲರೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ .

Share News

About admin

Check Also

ಕೈ ಕೊಟ್ಟ ಹುಡುಗಿ ಪ್ರೇಮಿ ದಗ ದಗ ಕಾಲೇಜು ಪ್ರೀತಿ ಜೀವನ್ಮರಣ ಹೋರಾಟ

ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು …

Leave a Reply

Your email address will not be published. Required fields are marked *