ವಿಜಯನಗರ: ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಮದುವೆಯಾಗಲು ಯುವತಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಮಾಡಿಕೊಂಡ ಯುವಕ ಗುಡೇಕೋಟೆ ಗ್ರಾಮದ ಬಿ. ಮಧುಸೂದನ್ (26) ಎಂದು ತಿಳಿದುಬಂದಿದೆ. ಅರೆ ಹುಚ್ಚನಂತೆ ಯುವಕನ ತಂದೆ ವರ್ತಿಸುತ್ತಾರೆಂಬ ಕಾರಣಕ್ಕೆ ಯುವಕನಿಗೆ ಕನ್ಯೆ ಕೊಡಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಮನನೊಂದ ಯುವಕ ಇತ್ತೀಚೆಗೆ ಮದ್ಯಕ್ಕೆ ದಾಸನಾಗಿದ್ದ.
ಏನೇನೊ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದು ನೋಡಿದೀವಿ ಆದ್ರೆ ಇಲ್ಲೊಬ್ಬ ವಿಚಿತ್ರ ಯುವಕ ಮದುವೆಗೆ ಹುಡುಗಿ ಸಿಗಲಿಲ್ಲ ಎಂದೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರ್ಗತಿನೋಡಿ
bigtvnews | Hubli Dharwad News | Kannada News | Karnataka News Hubli News | News In Hubli | Local news





