Breaking News

ಪ್ರಾಂಭವಾಗದ ಕಾಮಗಾರಿ : ಖ್ಯಾರೇ ಎನ್ನದ ಅಧಿಕಾರ

ಹುಬ್ಬಳ್ಳಿ : ನಗರದ ಪ್ರಖ್ಯಾತ ಜನತಾ ಬಜಾರ ಸುಪರ್ ಮಾರ್ಕೇಟ್ ಹತ್ತಿರದ ಅಂಚಟಗೇರಿ ಓಣಿಯಲ್ಲಿ ಹಲವು ಭಾರಿ ಸ್ಥಳೀಯರಿಂದ ಮತ್ತು ಅಲ್ಲಿ ವ್ಯಾಪಾರ ಮಾಡುವ ಅಂಗಡಿ ಮುಗ್ಗಟ್ಟಿನ ವ್ಯಾಪಾರಸ್ಥರಿಂದ ಪ್ರತಿಭಟನೆಗಳು ನಡೆದರು ಕೂಡ ಇಲ್ಲಿ ರಸ್ತೆಯ ಕಾಮಗಾರಿ ಮಾತ್ರ ಇನ್ನು ಪ್ರಾರಂಭವೆ ಅಗಿಲ್ಲ.

ಈ ಕುರಿತು ಅನೇಕ ಸಲ ಹು-ಧಾ ನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹಿತ ಪಾಲಿಕೆ ಅಧಿಕಾರಿಗಳು ಮಾತ್ರ ಈ ರಸ್ತೆ ಯ ಕಾಮಗಾರಿಯನ್ನು ಪ್ರಾರಂಭಿಸದೆ ಮಲತಾಯಿದೊರಣೆಯನ್ನ ತೋರಿಸುತ್ತಿದ್ದಾರೆ ಎಂದು ಸ್ಥಳಿಯರು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ರಸ್ತೆಯನ್ನು ಪೂರ್ತಿಯಾಗಿ ಅಗೆದು ಹಾಗೆ ಬಿಟ್ಟಿದ್ದು ಹಿಡಿಗಾತ್ರದ ಕಲ್ಲುಗಳು ಎದ್ದಿವೆ ಇದರಿಂದ ವಾಹನ ಸವಾರರಿಗೆ ಪಾದಚಾರಿಗಳಿಗೆ ಚಂಚರಿಸಲು ಹರಸಾಹಸ ಪಡುವಂತ ಪರಿಸ್ಥಿತಿ ಎದುರಾಗಿದೆ.ಇನ್ನು ಇಲ್ಲಿ ರಸ್ತೆ ಅಗೆದಾಗ ವಿದ್ಯುತ್ ತಂತಿಗಳು ಮತ್ತು ಮನೆಗಳಿಗೆ ಅಳವಡಿಸಿದ ಕುಡಿಯುವ ನಿರಿನ ಪೈಪಲೈನಗಳು ಕೂಡಾ ಹಾಳಾಗಿದ್ದು, ಮಳೆ ಬಂದರಂತು ರಸ್ತೆ ತುಂಬೆಲ್ಲಾ ನಿರು ನಿಂತು ಸ್ಥಳಿಯರು ನರಕಯಾತನೆ ಅನುಭವಿಸಬೇಕಾಗಿದೆ. ಇನ್ನು ಒಂದೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಿದ್ದು ಕೂಡಲೆ ಕಾಮಗಾರಿಯನ್ನು ಪ್ರಾರಿಂಭಿಸಬೇಕೆಂಬುದು ಸ್ಥಳೀಯರ ಅಳಲಾಗಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *