Breaking News

ಜಮೀರ್ ನನ್ನು ಲಾಕಪ್ ಗೆ ಹಾಕಿದರೆ ಸತ್ಯ ಹೊರಬೀಳಲಿದೆ.

ಚಿತ್ರದುರ್ಗ: ಬಸ್ ಸ್ಟಾಂಡ್ ನಲ್ಲಿ ಪಿಕ್ ಪಾಕೇಟ್ ಮಾಡುವವರನ್ನು ಲಾಕಪ್ ನಲ್ಲಿ ಹಾಕಿ ಹೊಡೆದು ವಸೂಲಿ ಮಾಡ್ತಾರೆ. ಹಾಗೇ ಜಮೀರ್ ಅವರನ್ನ ಪೊಲೀಸರು ಲಾಕಪ್ ನಲ್ಲಿ ಹಾಕಿ ಹೊದ್ದರೆ ಸತ್ಯ ಹೊರ ಬರುತ್ತೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು,ಕೇವಲ ಎಸ್ ಐಟಿ ತನಿಖೆಯಿಂದ ಸತ್ಯ ಹೊರ ಬರಲ್ಲ. ಹೀಗಾಗಿ ಕ್ಯಾಬಿನೆಟ್ ಯಿಂದ ಕೂಡಲೇ ಜಮೀರ್ ಅವರನ್ನ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಮೈತ್ರಿ ಸರ್ಕಾರದ ಕುರಿತು ಮಾತನಾಡಿ, ನಾವು ಸರ್ಕಾರ ಕೆಡುವುವ ಪ್ರಶ್ನೆಯೇ ಇಲ್ಲ.ಅವರು ಅವರೇ ಬಡಿದಾಡುತ್ತಿದ್ದಾರೆ.ರಾಜ್ಯದ ಜನರ ನೇತಾರ ಸಿಎಂ ಜನರ ಹಾಹಾಕಾರ ಎದುರಿಸುತ್ತಿದ್ದಾರೆ.ಒಂದು ವೇಳೆ ಮೈತ್ರಿ ಶಾಸಕರು ಪಕ್ಷಕ್ಕೆ ಬಂದರೆ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತೇವೆ ಎಂದರು.‌ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್ ಸೇರಿ ಅನೇಕರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಇದೇ ಕಾರ್ಡ್ ಮತ್ತೆ ಮುಂದುವರೆಸಿದ್ದಾರೆ ಇದರಲ್ಲಿ ಸಫಲ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *