Breaking News

26 ದಿನದಲ್ಲೇ ಸುಟ್ಟುಹೋದ ಕಿಯಾ ಕಾರು: ಹೊಸ ಕಾರು ನೀಡಲು ಧಾರವಾಡ ಆಯೋಗ ಸೂಚನೆ

ಹುಬ್ಬಳ್ಳಿಯ ಅಲ್ತಾಪ್ ನಗರದ ಮಹಮ್ಮದ್ ತಾಹೀರ್ ತಂಬೋಳಿ ಅವರು ಕೇವಲ 26 ದಿನಗಳ ಹಿಂದೆ ಖರೀದಿಸಿದ ಕಿಯಾ ಕಾರು ಬೆಂಕಿಗೆ ಆಹುತಿಯಾದ ಪ್ರಕರಣದಲ್ಲಿ, ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಕಾರು ಉತ್ಪಾದಕರಾದ ಕಿಯಾ ಮೋಟರ್ಸ್ ಕಂಪನಿಯ ವಿರುದ್ಧ ತೀರ್ಪು ನೀಡಿದೆ.ಘಟನೆಯನ್ನು ಉತ್ಪಾದನಾ ದೋಷ ಮತ್ತು ಸೇವಾ ನ್ಯೂನ್ಯತೆ ಎಂದು ಹೇಳಿ, ಕಿಯಾ ಮೋಟರ್ಸ್, ನಾಗಶಾಂತಿ ಸರ್ವಿಸ್ ಸೆಂಟರ್ ಮತ್ತು ಲೋಂಬಾರ್ಡ್ ವಿಮಾ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ 01.08.2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.ಕಿಯಾ ಮೋಟರ್ಸ್ ಕಂಪನಿಯವರು ದೂರುದಾರರಿಗೆ ಆಗಿರುವ ನಷ್ಟವನ್ನು ಭರಿಸುವ ಜವಾಬ್ದಾರಿಯಿದೆ. ಒಂದು ತಿಂಗಳೊಳಗೆ, ಕಿಯಾ ಮೋಟರ್ಸ್ ಅವರು ಅದೇ ಬ್ರಾಂಡ್‌ನ ಹೊಸ ವಾಹನವನ್ನು ರೋಡ್ ಟ್ಯಾಕ್ಸ್ ಸಹಿತವಾಗಿ ತಾಹೀರ್ ತಂಬೋಳಿ ಅವರಿಗೆ ನೀಡಬೇಕು ಎಂದು ಆಯೋಗ ನಿರ್ದೇಶಿಸಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *