ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಆಹಾರ ಅರಸಿ ನದಿ ತೋಟದ ವಸತಿಗೆ ನುಗ್ಗಿದ ಬೃಹತ್ ಮೊಸಳೆಯನ್ನುಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.ಬೃಹತ್ ಗಾತ್ರದ ೭ ಅಡಿ ಉದ್ದದ ಮೊಸಳೆಯು ಇತ್ತೀಚೆಗೆ ಕಂಡು ಬಂದಿದ್ದು, ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ವ್ಯಕ್ತವಾಗಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅರಣ್ಯ ಇಲಾಖೆಯ ಸಹಾಯವಿಲ್ಲದೆ ತಾವೇ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಸಫಲರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





