Breaking News

ದಾವಣಗೆರೆ :ಬ್ಯಾಂಕಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದ ಅಧಿಕಾರಿ!

ಕೆಲಸ ಮಾಡುತ್ತಿದ್ದ ಬ್ಯಾಂಕಿನ ಚಿನ್ನಾಭರಣವನ್ನು ಕದ್ದು ಬೇರೆಡೆ ಅಡವಿಟ್ಟು ₹ 2 ಕೋಟಿಗೂ ಅಧಿಕ ಸಾಲ ಪಡೆದು ‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್‌ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್‌ ಅಧಿಕಾರಿಯೊಬ್ಬ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ನಕಲಿ ಚಿನ್ನವನ್ನು ಅಡವಿಟ್ಟುಕೊಂಡು ತಾನೇ ಸಾಲ ಪಡೆದಿದ್ದ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ.’ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಹಂತ-ಹಂತವಾಗಿ ನಕಲಿ ಚಿನ್ನಾಭರಣಗಳನ್ನು ತನ್ನದೇ ಬ್ಯಾಂಕಿನಲ್ಲಿ ಅಡವಿಟ್ಟುಕೊಂಡಿದ್ದ. ಚಿನ್ನಾರಭರಣ ಪರಿಶೀಲನೆ, ದಾಖಲೆಗಳ ಸೃಷ್ಟಿಯ ಕೆಲಸವನ್ನು ತಾನೇ ನಿರ್ವಹಿಸಿದ್ದ. ಇಂತಹ 2 ಕೆ.ಜಿ 744 ಗ್ರಾಂ ನಕಲಿ ಚಿನ್ನಾಭರಣವನ್ನು ಅಡವಿಟ್ಟು ₹ 1.52 ಕೋಟಿ ಸಾಲ ಪಡೆದಿದ್ದ’ ಎಂದು ಪೊಲೀಸರು ವಿವರಿಸಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *