ವಿಜಯಲಕ್ಷ್ಮಿ ಎಲಿಗಾರ.
ಹುಬ್ಬಳ್ಳಿ: ಮೈತ್ರಿ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಗೊಂದಲಗಳು ಸೃಷ್ಟಿಯಾಗುತ್ತಿದೆ.ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ರಾಜೀನಾಮೆಯ ಅಲೆಯು ಮೈತ್ರಿಗೆ ಮುಳ್ಳಾಗಲಿದೆಯೇ ಎಂಬುದು ಪ್ರತಿಯೊಬ್ಬರಲ್ಲಿಯೂ ಕುತೂಹಲಕಾರಿ ಸಂಗತಿಯಾಗಿದೆ.
ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರ ರಚನೆ ಮಾಡಿದ್ದವು ಆದರೇ ದುರದೃಷ್ಟವಶಾತ್ ಪೂರ್ಣ ಅವಧಿ ಪೂರೈಸುವ ಮುನ್ನವೇ ಇಂತಹ ರಾಜೀನಾಮೆ ಹಾಗೂ ಪರಸ್ಪರ ಕಿತ್ತಾಟ, ಕೆಸರೆರಚಾಟಗಳು ನಡೆಯುತ್ತಾ ಬಂದಿವೆ. ಪ್ರಸ್ತುತ ದಿನಮಾನಗಳ ಬೆಳವಣಿಗೆ ಗಮನಿಸಿದಾಗ ಅತೃಪ್ತ ಶಾಸಕರ ಪಟ್ಟಿ ದಿನದಿಂದ ದಿನಕ್ಕೆ ವೃದ್ಧಿಸುತ್ತಾ ಹೋಗುತ್ತಿರುವುದು ಮೈತ್ರಿಯ ಅಂತ್ಯಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆ ಒಂದೆಡೆಯಾದರೇ ಮೈತ್ರಿಯನ್ನು ಶತಾಯಗತಾಯ ರಕ್ಷಿಸಲೇಬೇಕು ಎನ್ನುವಂತ ಜೆಡಿಎಸ್ ಹಾಗೂ ಕೈ ನಾಯಕರ ಸಾಹಸ ಇನ್ನೊಂದೆಡೆಯಾಗಿದೆ.ಮುಳ್ಳಾಗಲಿದೆಯೇ ರಾಜೀನಾಮೆ ಅಲೆ: ಮೈತ್ರಿ ಸರ್ಕಾರಕ್ಕೆ ಗ್ರಹಣ ಹಿಡಿದಿದ್ದು, ದಿನದಿಂದ ದಿನಕ್ಕೆ ಅತೃಪ್ತರ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ ಶಾಸಕರಾದ ಆನಂದ್‍ಸಿಂಗ್ ಹಾಗೂ ರಮೇಶ ಜಾರಕಿಹೊಳಿ ತಮ್ಮ ರಾಜೀನಾಮೆಯನ್ನು ನೀಡಿರುವುದು ತಿಳಿದಿರುವ ಸಂಗತಿಯಾಗಿದೆ ಅಲ್ಲದೇ ಇಂದು ಮತ್ತು ನಾಳೆ ಐದು ಜನ ಅತೃಪ್ತರು ರಾಜೀನಾಮೆ ನೀಡಲಿದ್ದಾರೆ ಎಂಬುವಂತ ಮಾಹಿತಿ ಬಲ್ಲ ಮೂಲಗಳಿಂದ ಬಂದಿದೆ. ಈ ಐವರ ಪಟ್ಟಿಯಲ್ಲಿ ಹಿರೇಕೆರೂರ ಶಾಸಕ ಬಿ.ಸಿ.ಪಾಟೀಲ, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ ಕುಮಟಹಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೆಸರಿದೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ ಕೂಡ ರಾಜೀನಾಮೆ ನೀಡಬಹುದು ಎಂದು ಕೂಡ ಆಪ್ತವಲಯದಿಂದ ಕೇಳಿ ಬಂದಿರುವ ಮಾಹಿತಿಯಾಗಿದೆ. ಒಟ್ಟಾರೆಯಾಗಿ ಮೈತ್ರಯಲ್ಲಿ ಚಿಗುರೊಡೆದಿರುವ ರಾಜೀನಾಮೆ ಅಲೆ ಮೈತ್ರಿ ಸಂಬಂಧಕ್ಕೆ ಮುಳ್ಳಾಗಲಿದೆಯೇ ಎಂಬ ಭೀತಿ ಕಾಡುತ್ತಿರುವುದಂತೂ ನಿಜವಾಗಿದೆ..ಕೈ ಪಾಳೆಯದ ನಾಯಕರ ನಂಬಿಕೆ: ಮೈತ್ರಿ ಸರ್ಕಾರ ಪೂರ್ಣ ಅವಧಿ ಪೂರೈಸುವ ಮೂಲಕ ಮೈತ್ರಿ ಪಾಲನೆ ಮುನ್ನಡೆ ಸಾಧಿಸಲಿದೆ ಎಂದು ಕೈ ಪಾಳೆಯದ ನಾಯಕರು ವಿಶ್ವಾಸ ಹೊರಹಾಕುತ್ತಿದ್ದಾರೆ ವಿನಃ ಅತೃಪ್ತ ಶಾಸಕರನ್ನು ಮನವೊಲಿಸುವದಾಗಲಿ ಅಥವಾ ಅವರ ಅಸಮಾಧಾನವನ್ನು ತಣಿಸುವ ಕಾರ್ಯವನ್ನಾಗಲಿ ನಾಯಕರು ಮಾಡುತ್ತಿಲ್ಲ. ಆದರೇ ನಂಬಿಕೆಯ ಬಗ್ಗೆ ಹೇಳಿಕೆ ನೀಡುತ್ತಿರುವದನ್ನು ನೋಡಿದರೇ ಗೊಂದಲವೇ ಇಲ್ಲವೆನೋ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ ಒಬ್ಬೊಬ್ಬರಾಗಿ ಹೊರ ನಡೆಯುತ್ತಿದ್ದಾರೆ ಇದನೆಲ್ಲ ಗಮನಿಸಿದಾಗ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿಕೊಳ್ಳುವಂತ ಪರಿಸ್ಥಿತಿ ಬಂದರೂ ಚಿಂತಿಸಬೇಕಿಲ್ಲ.
ಆಪರೇಷನ್ ಕಮಲ ಅಲ್ವಂತೆ ಇದು: ಅತೃಪ್ತ ಶಾಸಕರು ಹೊರ ನಡೆಯುತ್ತಿರುವದರ ಬಗ್ಗೆ ಬಿಜೆಪಿ ನಾಯಕರನ್ನು ಕೇಳಿದಾಗ ಇದು ಆಪರೇಶನ್ ಕಮಲ ಅಲ್ಲ ಅಸಮಾಧಾನಿತ ಶಾಸಕರು ಹೊರ ನಡೆಯುತ್ತಿದ್ದಾರೆ ವಿನಃ ಇಲ್ಲಿ ಯಾವುದೇ ರೀತಿಯ ಕೈವಾಡವಿಲ್ಲ ಅಲ್ಲದೇ ಇದು ಆಪರೇಶನ್ ಕಮಲವಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.ಇನ್ನಾದರೂ ಶಮನಗೊಳ್ಳಲಿದೆಯೇ ರಾಜೀನಾಮೆ ಜ್ವಾಲೆ: ಮೈತ್ರಯಲ್ಲಿ ಸುಡುವ ಅನುಭವ ಸೃಷ್ಟಿಸಿರುವ ರಾಜೀನಾಮೆ ಶಮನಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.ಅತೃಪ್ತರನ್ನು ಹೊರಹೋಗದಂತೆ ನಿಯಂತ್ರಿಸಲು ಸಿಎಂ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ನೇತೃತ್ವದ ಮೈತ್ರಿ ಸಂಬಂಧ ಯಾವ ಕ್ರಮ ಅನುಸರಿಸಲಿದೇ ಎಂಬುವುದನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





