Breaking News

ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದವರಿಗೆ ಮೊದಲು ಒಂದು ವಾರ್ಡ್ ಗೆಲ್ಲುವ ತಾಕತ್ತು ಇದೆಯಾ..?

ಜನರ ನಾಲ್ಕು ಮತ ಪಡೆಯಲು ಕಷ್ಟ… ಇಡೀ ಜಿಲ್ಲೆ ಕಾಂಗ್ರೆಸ್ ಮುನ್ನಡೆಸುವ ಆಸೆ! ಅಯ್ಯೋ ದುರಂತ.!

ಹುಬ್ಬಳ್ಳಿ–ಧಾರವಾಡದಲ್ಲಿ ಡಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಹಾಕಿದವರ ಸಂಖ್ಯೆ ಹೆಚ್ಚಾಗಿದೆ. ಅರ್ಜಿ ಹಾಕುವುದಕ್ಕೆ ಯಾರಿಗೂ ತಡೆ ಇಲ್ಲ. ಆದರೆ ಅರ್ಜಿ ಹಾಕುವ ಮುನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲೇಬೇಕು.!

ಒಂದು ವಾರ್ಡ್‌ನಲ್ಲಿ ಕಾರ್ಪೊರೇಟರ್ ಆಗಿ ಗೆದ್ದು ಬರುವಷ್ಟು ಜನಬೆಂಬಲ ಇಲ್ಲದವರು, ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಅಧ್ಯಕ್ಷ ಸ್ಥಾನ ಕೇಳುವುದು ಸರೀನಾ.? ತಪ್ಪಾ.?

ಮೊದಲು ಒಂದು ವಾರ್ಡ್‌ನಲ್ಲಿ ನಿಂತು ಗೆದ್ದು ತೋರಿಸಿ.
ಜನರ ವಿಶ್ವಾಸ ಇದೆಯಾ? ಮತದಾರರ ಬೆಂಬಲ ಇದೆಯಾ? ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿ ಇದೆಯಾ? ಅನ್ನೋದನ್ನು ಸಾಬೀತುಪಡಿಸಿ.

ಅದಾದ ಮೇಲೆ ಡಿಸಿಸಿ ಅಧ್ಯಕ್ಷ ಸ್ಥಾನದ ಕನಸು ಕಾಣಲಿ!

ನಾಲ್ಕು ಜನರ ಮತವನ್ನೂ ಒಗ್ಗೂಡಿಸಲು ಸಾಧ್ಯವಾಗದ ವ್ಯಕ್ತಿ, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಹೇಗೆ ಮುನ್ನಡೆಸುತ್ತಾರೆ.?

ಇದು ಕೇವಲ ಹುದ್ದೆಯ ಪ್ರಶ್ನೆಯಲ್ಲ.
ಇದು ಕಾಂಗ್ರೆಸ್ ಪಕ್ಷದ ಭವಿಷ್ಯದ ಪ್ರಶ್ನೆ!

ಹುದ್ದೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಹುದ್ದೆಗೆ ತಕ್ಕ ಯೋಗ್ಯತೆ ಇದೆಯಾ? ಜನಬೆಂಬಲ ಇದೆಯಾ? ಸಂಘಟನಾ ಸಾಮರ್ಥ್ಯ ಇದೆಯಾ? ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ತಾಕತ್ತು ಇದೆಯಾ.?

ಈ ಪ್ರಶ್ನೆಗಳಿಗೆ ಉತ್ತರ ಇಲ್ಲದೆ ಕೇವಲ ಅರ್ಜಿ ಹಾಕಿದ ಮಾತ್ರಕ್ಕೆ ಡಿಸಿಸಿ ಅಧ್ಯಕ್ಷ ಸ್ಥಾನ ಸಿಗಬೇಕಾ?

ಹೈಕಮಾಂಡ್ ಅರ್ಜಿಗಳ ಸಂಖ್ಯೆಯನ್ನು ನೋಡಬಾರದು…
ಜನರ ನಡುವಿನ ಕೆಲಸ ನೋಡಬೇಕು!
ಗೆಲ್ಲಿಸುವ ಸಾಮರ್ಥ್ಯ ನೋಡಬೇಕು!
ಕಾರ್ಯಕರ್ತರ ಬೆಂಬಲ ನೋಡಬೇಕು!

ಇಲ್ಲವಾದರೆ ಒಂದು ಗಂಭೀರ ಪ್ರಶ್ನೆ ಎದುರಾಗುತ್ತದೆ—

ಡಿಸಿಸಿ ಅಧ್ಯಕ್ಷ ಸ್ಥಾನ ಅನ್ನೋದು ಜನಬೆಂಬಲ ಇರುವ ನಾಯಕನಿಗೆ ಸಿಗಬೇಕಾದ ಹುದ್ದೆಯಾ?
ಅಥವಾ ಅರ್ಜಿ ಹಾಕಿದವರಿಗೆ ಹಂಚುವ ಹುದ್ದೆಯಾ?

ಒಂದು ವಾರ್ಡ್ ಗೆಲ್ಲಲು ತಾಕತ್ತು ತೋರಿಸದವರು ಇಡೀ ಜಿಲ್ಲೆಯನ್ನು ಗೆಲ್ಲಿಸುವ ಮಾತು ಆಡಿದರೆ—ಇದು ಸರೀನಾ? ತಪ್ಪಾ?

ಹೈಕಮಾಂಡ್ ಈಗಲೇ ಉತ್ತರಿಸಬೇಕು!

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *