Breaking News

ಅಮಾಯಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ

ಚಿಕ್ಕಬಳ್ಳಾಪುರ: ಬಸ್ ಮತ್ತು ಟಾಟಾ ಮ್ಯಾಜಿಕ್ ನಡುವೆ ಭೀಕರ ಅಪಘಾತ ನಡೆದು ಟಾಟಾ ಮ್ಯಾಜಿಕ್ ನಲ್ಲಿದ್ದ ಹನ್ನೆರಡು ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಬಾರ್ಲಹಳ್ಳಿ ಗೇಟ್ ಬಳಿ ನಡೆದಿದೆ. ‌ಎಸ್ ಕೆ ಎಸ್ ಬಸ್ ಮುರಗಮಲ್ಲ ದಿಂದ ಚಿಂತಾಮಣಿಗೆ ಹೊಗುತ್ತಿದ್ದ ವೇಳೆ ಘಟನೆ ನಡೆದಿದ್ದು,ಅಪಘಾತದಲ್ಲಿ ಹನ್ನೆರಡು ಜನರ ದಾರುಣ ಸಾವನ್ನಪ್ಪಿದ್ದಾರೆ. ಎಂಟು ಜನ ಗಂಡಸರು ಹಾಗೂ ನಾಲ್ಕು ಜನ ಹೆಂಗಸರು ಸೇರಿದಂತೆ ಹನ್ನೆರಡು ಜನ ಮಾರಣಹೋಮ ನಡೆದಿದೆ.ಖಾಸಗೀ ಬಸ್ ವೇಗವಾಗಿ ಬಂದದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಮೃತ ವಿವರ ಇನ್ನೂ ತಿಳಿದು ಬಂದಿಲ್ಲ.ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನಾ ಸ್ಥಳದಲ್ಲಿ ನೂರಾರು ಸಾರ್ವಜನಿಕರು ನೆರೆದಿದ್ದು ಕಂಡು ಬಂದಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *