Breaking News

ಹೆಣ್ಣಿನ ಮೇಲಿನ‌ ವ್ಯಾಮೋಹದಿಂದ ಸೆರಮನೆ ಸೇರಲಿರುವ ದೋಸೆ ಕಿಂಗ್

ಬೆಂಗಳೂರು: ಕೊಲೆ ಪ್ರರಕರಣದ ಒಂದರಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾದ ಖ್ಯಾತ ರೆಸ್ಟೋರೆಂಟ್ ‘ಶರವಣ ಭವನ’ದ ಮಾಲೀಕರಾದ ಪಿ.ರಾಜಗೋಪಾಲ್ ಸಧ್ಯದಲ್ಲೇ ಜೈಲು ಸೇರಲಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಎಷ್ಟೋ ಮಂದಿ ಅರೆ ಇದೇನಪ್ಪ ಅಲ್ಲಿ ನೆನ್ನೆ ತಾನೆ ದೋಸೆ ತಿಂದೆ ಅಂತ ಎಷ್ಟೋ ಜನಕ್ಕೆ ಅನಿಸದೆ ಇರದು ಓ ಯಾವುದೋ ಚೆಕ್ ಬೌನ್ಸ್ ಅಥವಾ ಹಣಕಾಸಿನ ವ್ಯವಹಾರನೂ! ಇರಬಹುದು ಅನ್ಕೊಂಡ್ರೆ ಅದು ಭ್ರಮೆ ಕಾರಣ ಇಲ್ಲಿದೆ ನೋಡಿ ಸನತ್ ಕುಮಾರ ಕೊಲೆಗೆ ಸಂಬಂಧಿಸಿದಂತೆ,ಇದೆ ಜುಲೈ 7 ರೊಳಗೆ ಪೊಲೀಸರಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಈ ಆದೇಶದಂತೆ ಹೋಟೆಲ್ ಶರವಣ ಭವನದ ಮಾಲೀಕ ಪಿ ರಾಜಗೋಪಾಲ್ ಜೈಲ್ ಸೇರಲಿದ್ದಾರೆ.ಘಟನೆ ವಿವರ: ಈ ಹಿಂದೆ ಇವರದೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಮ್ಯಾನೇಜರ್ ಮಗಳು ಜೀವಜ್ಯೋತಿ ಎಂಬುವರನ್ನ ಪಿ .ರಾಜಗೋಪಾಲ್ ಮದುವೆ ಆಗಬೇಕೆಂದು ಬಯಸಿದರು ಆದರೆ ಈಗಾಗಲೇ 2 ಮದುವೆ ಆಗಿದ್ದ ಕಾರಣಕ್ಕೆ ಜೀವಜ್ಯೋತಿ ರಾಜಗೋಪಾಲ್ ರನ್ನ ಮದುವೆ ಯಾಗಲು ನಿರಾಕರಿಸಿದ್ದರು. ಈ ಬೆನ್ನಲ್ಲೆ 1999 ರಲ್ಲಿ ಉಧ್ಯಮಿ ಸನತ್ ಕುಮಾರ್ ಎಂಬುವರನ್ನ ಜೀವಜ್ಯೋತಿ ಮದುವೆ ಆಗಿ ಕೆಲ ಕಾಲ ಸುಖ ಸಂತೋಷದಿಂದ ನೆಮ್ಮದಿಯ ಸಂಸಾರ ಸಾಗಿಸುತ್ತಾರೆ ಇದರಿಂದ ಆಕ್ರೋಶ ಗೊಂಡ ರಾಜ್ ಗೋಪಾಲ್ 2001 ರಲ್ಲಿ ಉಧ್ಯಮಿ ಸನತ್ ಕುಮಾರ್ ಅವರನ್ನ ಅಪಹರಿಸಿ ಕೊಲೆಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಸನತ್ ಕುಮಾರ್ ಶವ ಕೊಡೈ ಕೆನಾಲ್ ಬೆಟ್ಟದ ಸಮೀಪ ಪತ್ತೆಯಾದ ಬಳಿಕಈ ಘಟನೆ ಬೆಳಕಿಗೆ ಬಂದಿತ್ತು ಪೊಲೀಸರು ರಾಜಗೋಪಾಲ್ ವಿರುದ್ಧ IPC ಸೇಕ್ಷೆನ್ 302(ಕೊಲೆ)(364 ) ಅಪಹರಣ ಮತ್ತು 2019 (ಸಾಕ್ಷ್ಯಗಳ ನಾಶ ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಗಳಾದ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ಆರೋಪಿ ಪಿ ರಾಜಗೋಪಾಲ್ ಅವರಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು ಇದೆ ಜುಲೈ 7 ರಂದು ಶರಣಾಗುವಂತೆಯು ಸುಪ್ರೀಮ್ ಕೋರ್ಟ್ ಆದೇಶಿಸಿತ್ತು.‌ಇನ್ನು ಈ ಹೋಟೆಲ್ ಬಗ್ಗೆ ಹೇಳುವುದಾದರೆ ತಮಿಳು ನಾಡು ಮೂಲದ ಶರವಣ ಭವನ ತನ್ನ ಶಾಖೆ ಗಳನ್ನು ಲಂಡನ್ ಸಿಂಗಾಪುರ ಸೇರಿದಂತೆ ವಿದೇಶಗಳಲ್ಲಿ ತೆರೆದಿದೆ ಇಡ್ಲಿ ದೋಸೆಗೆ ಬಾರಿ ಹೆಸರು ವಾಸಿಯಾಗಿದೆ ಈ‌ ಶರವಣ ಭವನ ಹೋಟೆಲ್.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *