Breaking News

ಅಲ್ಪಸಂಖ್ಯಾತ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ಹತ್ಯೆ, ಅತ್ಯಾಚಾರ, ಮಾರಣಾಂತಿಕ ಹಲ್ಲೆಗಳಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಜಾರಿದ್ದಾರೆಂದು ಸುನ್ನಿ ಯುವ ಶಕ್ತಿ ನಗರದಲ್ಲಿಂದು ಪ್ರತಿಭಟನೆ ನಡೆಸಿತು. ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಂಸತಿಗೆ, ಸಂವಿಧಾನಕ್ಕೆ ನಮಸ್ಕಾರ ಮಾಡಿ ಸಬ್ ಕಾ‌ ಸಾತ ಸಬ್ ಕಾ ವಿಕಾಸ ಹೊಂದಿತು ಎಂದು ಹೇಳಿದ್ದಾರೆ. ಆದರೆ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳಾಗುತ್ತಿದ್ದರು. ಪ್ರಧಾನಿ ಮೌನಕ್ಕೆ ಜಾರಿರುವುದು ವಿಷಾದನೀಯ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಹಕ್ಕುಗಳಿವೆ. ಅವುಗಳ ಮೇಲೆಯೇ ಒತ್ತಡ ತಂದು ದೌರ್ಜನ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಕದಡುತ್ತಿದ್ದು, ಇನ್ನೂ ಇದು ಹಿಂಸಾತ್ಮಕ ವಾತಾವಕ್ಕೆ ತಿರುಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಭಾರತದ ಇತಿಹಾಸದಲ್ಲಿ ಮತ್ತೊಂದು ಸಾಮಾಜಿಕ ಸಮಾನತೆಗಾಗಿ ಚಳುವಳಿ‌ ಮಾಡಬೇಕಾಗಯವುದು ಎಂದು ಎಚ್ಚರಿಸಿ ತಹಶಿಲ್ದಾರರ ಮೂಲಕ‌ ಪ್ರಧಾನಿಗೆ ಮನವಿ‌ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರಾರು ಸುನ್ನಿ ಯುವ ಶಕ್ತಿಯ ಕಾರ್ಯಕರ್ತರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *