ಮಂಡ್ಯ: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು ಬೋರಾ ನಾಯಕ ಅವರಿಗೆ ಜಾನಪದ ವಿದ್ವಾಂಸ ಹಾಗೂ ಚಲನಚಿತ್ರ ಗೀತ ರಚನಕಾರರಾದ ಡಾ. ಎಸ್.ಕೆ. ಕರೀಂಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.ಇದೇ ವೇಳೆ ಹಾಸನ ತಾಲ್ಲೂಕು ಕಸಾಪ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಅವರಿಗೆ ‘ಸಮಾಜಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಕ್ರಿಯಾಶೀಲ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಉಪ್ಪಾರ್, ಕನ್ನಡ ಪ್ರಾಧ್ಯಾಪಕರಾದ ಡಾ. ಎಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಬಿ.ಎನ್. ರಾಮಸ್ವಾಮಿ, ಸಾಹಿತಿಗಳಾದ ಪತ್ತಂಗಿ ಎಸ್. ಮುರಳಿ ಉಪಸ್ಥಿತರಿದ್ದರು.
ಬೋರಾ ನಾಯಕ ಬಿಗ್ ಟಿ.ವಿ. ನ್ಯೂಸ್ ಮಂಡ್ಯ.
bigtvnews | Hubli Dharwad News | Kannada News | Karnataka News Hubli News | News In Hubli | Local news





