Breaking News

ನೀರಸಾಗರ ಜಲಾಶಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನೀರಸಾಗರ ಜಲಾಶಯದ ಕೆಳಭಾಗದ ಸುತ್ತಮುತ್ತ ಒತ್ತುವರಿಯಾಗಿದ್ದ ಸುಮಾರು 23.5 ಎಕರೆ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಇಂದು ಪ್ರಾರಂಭವಾಯಿತು.ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸೂಚನೆಯಂತೆ, ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಒತ್ತುವರಿ ತೆರವುಗೊಳಿಸಿ ತಗ್ಗು ತೋಡಿ ಗಡಿಯುದ್ದಕ್ಕೂ ತಂತಿಬೇಲಿ ನಿರ್ಮಿಸಲಾಗುವುದು.ಜಲಾನಯನ ಪ್ರದೇಶದಲ್ಲಿ ಗಿಡನೆಡಲಾಗುವುದು ಎಂದು ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ತಿಳಿಸಿದರು.ಧಾರವಾಡ ತಹಸೀಲ್ದಾರ ಪ್ರಕಾಶ ಕುದರಿ, ಕಲಘಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವ್ ಸೇರಿದಂತೆ, ನಗರ ನೀರು ಸರಬರಾಜು ಮಂಡಳಿ, ಅರಣ್ಯ ಇಲಾಖೆ,ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *