ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ .ಮಂಗಳೂರು ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎಂಬುದು ನನ್ನ ಆಗ್ರಹವಾಗಿದೆ .ಈಗ ಕೇಂದ್ರ ಸರಕಾರಕ್ಕೆ ಲೋಕ ಸಭೆಯಲ್ಲಿ ಸಂಖ್ಯಾ ಬಲವಿದೆ .ಕೆಲವೇ ತಿಂಗಳುಗಳಲ್ಲಿ ರಾಜ್ಯ ಸಭೆಯಲ್ಲಿ ಬಹುಮತ ದೊರೆಯಲಿದೆ .ಆ ಬಳಿಕ ಸಂಸತ್ತಿನಲ್ಲಿ ಈ ಬಿಲ್ ಪಾಸ್ ಅಗಬಹುದೆಂದು ಹೇಳಿದರು .ನಾಳೆ ಕೇಂದ್ರ ಬಜೆಟ್ ಜನಪರವಾಗಿ ಮೂಡಿ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು .ಗೋ ಹತ್ಯಾ ನಿಷೇದ ಕಾನೂನು ಕೂಡಾ ಜಾರಿಗೆ ತರಲಿ ಎಂದು ಒತ್ತಾಯಿಸಿದರು .ಪೇಜಾವರ ಮಠದ ವತಿಯಿಂದ ಶಿವಮೊಗ್ಗದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹಾಸ್ಟೆಲ್ ಹುಬ್ಬಳ್ಳಿಯಲ್ಲಿ ಶಾಲೆಯೊಂದನ್ನು ತೆರೆಯಲಾಗುವುದು ಎಂದು ಹೇಳಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





