ಆನೇಕಲ್ :ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ದುರಾಡಳಿತ ಹಾಗು ಅಕ್ರಮಗಳಿಗೆ ಬೇಸತ್ತು ಗ್ರಾಮಸ್ಥರು ಹಾಗು ಪಂಚಾಯಿತಿ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕರ್ಪೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಹಾಗು ಪಿಡಿಓ ಬಸವರಾಜ್ ದುರಾಡಳಿತ ದಿಂದ ಗ್ರಾಮಸ್ಥರು ಹಾಗು ಸದಸ್ಯರು ಬೇಸತ್ತು ಹೋಗಿದ್ದು ಇಂದು ಉಪವಾಸ ಸತ್ಯಾಗ್ರಹ ನಡೆಸಿ ಪಂಚಾಯತಿ ಕಚೇರಿ ಮುಂಬಾಗ ಧರಣಿಯನ್ನು ಹಮ್ಮಿಕೊಂಡಿದ್ದರು. ಇನ್ನು ಇದೆ ಕರ್ಪೂರ ಪಂಚಾಯತಿಯ ದಿನ್ನೂರು ಗ್ರಾಮದಲ್ಲಿ ಸುಮಾರು 6 ವರ್ಷಗಳ ಹಿಂದೆ ಸರ್ಕಾರದಿಂದ ಬಡವರಿಗೆ ಮಂಜೂರಾಗಿರುವ ಸ್ಥಳದಲ್ಲಿ ಶೌಚಾಲಯ ವಿದ್ಯುತ್ ಮೂಲಭೂತ ಸೌಕರ್ಯಗಳಿಲ್ಲದೆ ಈಗಲೂ ಸಹ ಅಲ್ಲಿನ ಜನ ಬಯಲಿನಲ್ಲಿ ಶೌಚಾಲಯಕ್ಕೆ ಹೋಗುವಂತಹ ಪರಿಸ್ಥಿತಿಯಲ್ಲಿದ್ದು ಸಾಕಷ್ಟು ಬಾರಿ ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜನರ ಸಮಸ್ಯೆಗೆ ಕಿಮ್ಮತ್ತು ಬೆಲೆ ಕೊಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ 6 ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿರುವ ಜಾಗಗಳನ್ನು ಬಡವರಿಗೆ ಖಾತೆ ಮಾಡಿಸಿಕೊಡದೆ ಕೆಲ ಪ್ರಭಾವಿಗಳ ಜೊತೆ ಶಾಮಿಲಾಗಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ, ಕೂಡಲೇ ಸ್ಥಳಕ್ಕೆ ತಾಲ್ಲೂಕು ಪಂಚಾಯತ್ ಇಓ ಬಂದಯ ದುರಾಡಳಿತ ನಡೆಸುತ್ತಿರುವ ಪಂಚಾಯತಿ ಅಧ್ಯಕ್ಷರ ಹಾಗು ಪಿಡಿಓ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.ನಂತರ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯತ್ ಇಓ ರಮೇಶ್ ಸತ್ಯಾಗ್ರಹ ನಡೆಸುತ್ತಿದ್ದ ಸದಸ್ಯರನ್ನು ಹಾಗು ಗ್ರಾಮಸ್ಥರನ್ನು ಮನವೊಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





