ಧಾರವಾಡ: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜ್ ನ ಶೌಚಾಲಯದಲ್ಲಿ ನಡೆದ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹರಿಹಾಯ್ದರು.ಧಾರವಾಡ ನಗರದಲ್ಲಿ ಪಬ್ಲಿಕ್ ನೆಕ್ಸ್ ಜೊತೆ ಮಾತನಾಡಿದ ಅವರು, ಉಡುಪಿಯಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವೀಡಿಯೊ ಮಾಡಿದ ಪ್ರಕರಣದಲ್ಲಿ ಈಗಾಗಲೇ ಸತ್ಯ ಬಯಲಾಗಿದೆ. ಮುಸ್ಲಿಂ ಯುವತಿಯರು, ಹಿಂದೂ ಯುವತಿಯರ ವೀಡಿಯೊ ಮಾಡಿದ್ದಾರೆ ಎಂದು ಸಚಿವರಿಗೆ ಗೊತ್ತಿದೆ. ಆದರೂ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷವು ಮುಸ್ಲಿಂ, ಕ್ರೈಸ್ತರ ಓಲೈಕೆ ಮಾಡುತ್ತಿದೆ. ಅವರ ಮತಗಳಿಗಾಗಿ ಓಲೈಕೆಯ ಗೊಂದಲಮಯ ಹೇಳಿಕೆಗಳನ್ನು ಇಂದು ಸಚಿವರು ನೀಡುತ್ತಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





