ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪುರಸಭೆಯ ಮಾಜಿ ಅಧ್ಯಕ್ಷೆ ರತ್ನಮ್ಮ ರಾಮಲಿಂಗೇಗೌಡ ಅವರ ಸಹೋದರ ಕೆ.ಆರ್.ಪೇಟೆ ಪಟ್ಟಣದ ಮುಖಂಡರು ಹಾಗೂ ಹಾಲುಮತ ಕುರುಬ ಸಮಾಜದ ನಾಯಕರಾದ ಕೆ.ಪಿ.ರಾಮೇಗೌಡ(65) ಅವರು ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇಂದು ಸಂಜೆ ಕೆ.ಆರ್.ಪೇಟೆ ಪಟ್ಟಣದ ಅವರ ಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರವು ನಡೆಯಲಿದೆ ಎಂದು ಪುರಸಭೆಯ ಸದಸ್ಯ ಕೆ.ಆರ್.ರವೀಂದ್ರಬಾಬು ತಿಳಿಸಿದ್ದಾರೆ.ಕೆ.ಪಿ.ರಾಮೇಗೌಡ ಅವರ ನಿಧನಕ್ಕೆ ಶಾಸಕ ಡಾ.ನಾರಾಯಣಗೌಡ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮಾಜಿಸ್ಪೀಕರ್ ಕೃಷ್ಣ, ಎಪಿಎಂಸಿ ಮಾಜಿಅಧ್ಯಕ್ಷ ಕೆ. ಎನ್.ಕೃಷ್ಣ, ಜೆಡಿಎಸ್ ಮುಖಂಡ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್, ಪುರಸಭೆಯ ಮಾಜಿಸದಸ್ಯರಾದ ಕೆ.ಆರ್.ವಿನೋದ್ ಕುಮಾರ್, ಕೆ.ಕೆ.ಪುರುಷೋತ್ತಮ್ ತೀವ್ರ ಸಂತಾಪ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





