Breaking News

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಎರಡನೇ ತಾಲ್ಲೂಕು ಸಮ್ಮೇಳನ.

ಆನೇಕಲ್: ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತಾಲ್ಲೂಕಿನ ಎರಡನೇ ಸಮ್ಮೇಳನವನ್ನು ಸಿಐಟಿಯು ವತಿಯಿಂದ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ನೂರಾರು ಜನ ಕಟ್ಟಡ ಕಾರ್ಮಿಕರು ಭಾಗವಹಿಸಿ ಆದರಿಂದ ಬರುವ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲ್ಲೂಕು ಕಟ್ಟಡ ಕಾರ್ಮಿಕರ ಎರಡನೇ ಸಮ್ಮೇಳನಕ್ಕೆ ರಾಜ್ಯ ಕಾರ್ಯದರ್ಶಿ ಮಹಂತೇಶ್ ಉಪಸ್ಥಿತಿಯಲ್ಲಿ ಸಿಐಟಿಯು ಮುಖಂಡರು ಸೇರಿದಂತೆ ನೂರಾರು ಜನ ಕಟ್ಟಡ ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಿ ಸದಸ್ಯತ್ವದ ನಂತರ ಅವರಿಗೆ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು,ಇನ್ನು 1996 ರಲ್ಲಿ ಕಟ್ಟಡ ಕಾರ್ಮಿಕರ ಕಾನೂನಿನ ಅಡಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಗಳು ಇದ್ದು ಅದರಲ್ಲಿ ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಯಷ್ಟು ಹಣ ಸಂಗ್ರಹವಾಗಿದೆ ಆದ್ರೆ ಈಗ ದೇಶದಲ್ಲಿ ಅಧಿಕಾರದಲ್ಲಿರುವಂತಹ ನರೇಂದ್ರ ಮೋದಿ ಸರ್ಕಾರ ಆ ಕಾನೂನನ್ನು ರದ್ದು ಪಡಿಸಬೇಕೆಂದು ಪಾರ್ಲಿಮೆಂಟ್ನಲ್ಲಿ ಮಂಡನೆ ಮಾಡುವುದಕ್ಕೆ ಹೊರಟಿದ್ದಾರೆ ಸಾಮಾಜಿಕ ಸುರಕ್ಷತಾ ಸಮ್ಮಿತೀಯ ಹೆಸರಿನಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವಂತಹ ಈ ಕಾನೂನನ್ನು ರದ್ದು ಪಡಿಸಿದರೆ ಈಗ ನಮ್ಮ ದೇಶದಲ್ಲಿ ಇರುವಂತಹ ನಾಲ್ಕು ಕೋಟಿ ಜನ ಕಟ್ಟಡ ಕಾರ್ಮಿಕರು ಫಲಾನುಭವಿಗಳಾಗಿರುವುದರಿಂದ ಅವರಿಗೆ ಮಕ್ಕಳ ವಿಧ್ಯಾರ್ಥಿ ವೇತನ, ಕಾರ್ಮಿಕರ ಮಕ್ಕಳ ಮದುವೆಗೆ ಹಾಗು ಕಾರ್ಮಿಕರ ಅಪಘಾತ ಮರಣಕ್ಕೆ , ಆರೋಗ್ಯಕ್ಕೆ ಸೌಲಭ್ಯಗಳು ಸಿಗುತ್ತಿದೆ,ಕೇಂದ್ರ ಸರ್ಕಾರ ಈ ಕಾನೂನು ರದ್ದು ಮಾಡಿ ಸಾಮಾಜಿಕ ಸುರಕ್ಷತಾ ಕಾನೂನು ಜಾರಿ ಮಾಡಿದ್ರೆ ಕೋಟ್ಯಾಂತರ ಜನ ಕಟ್ಟಡ ಕಾರ್ಮಿಕರ ಬದುಕಿನ ಮೇಲೆ ಹೊಡೆತ ಬೀಳುತ್ತದೆ ಆಗಾಗಿ ಇದನ್ನು ನಾವೆಲ್ಲರೂ ತೀವ್ರವಾಗಿ ವಿರೋಧ ಮಾಡುತ್ತಿದ್ದೇವೆ ಕೇಂದ್ರ ಸರ್ಕಾರ ಇಂತಹ ತಿದ್ದು ಪಡಿಯ‌ನ್ನು ಕೈಬಿಟ್ಟು ಇರುವಂತಹ ಕಾನೂನನ್ನು ಬಲಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಸಿಐಟಿಯು ಕಟ್ಟಡ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ಮಹಂತೇಶ್ ತಿಳಿಸಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *