Breaking News

ಗುರೂಜಿ ಕೊಲೆ ಹಿನ್ನಲೆ : ದೈವದ ಮೊರೆ ಹೋದ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ

ಹುಬ್ಬಳ್ಳಿ : ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ ಗುರೂಜಿ ಅವರ ಬರ್ಬರ ಕೊಲೆ ಹಿನ್ನಲೆ ಹೋಟೆಲ್ ಆಡಳಿತ ಮಂಡಳಿ & ಸಿಬ್ಬಂದಿ ವರ್ಗ ದೈವದ ಮೊರೆ ಹೋಗಿದ್ದಾರೆ.

ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಟೆಲ್ ಆಡಳಿತ ಮಂಡಳಿ ಹೋಮ ಹಾಕಿಸಿದ್ದಾರೆ. ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಿಸಲಾಗುತ್ತಿದೆ. ಗುರೂಜಿ ಹತ್ಯೆಯಿಂದ ತೀವ್ರ ಆತಂಕಗೊಂಡ ಸಿಬ್ಬಂದಿ. ಹೋಟೆಲ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹೋಮ ಮಾಡಲಾಗುತ್ತಿದೆ. ಹುಬ್ಬಳ್ಳಿ ಖ್ಯಾತ ಪುರೋಹಿತರಿಂದ ಪೂಜೆ ಮಾಡಿಸಲಾಗುತ್ತಿದೆ. ಸುದರ್ಶನ ಹೋಮ ಮಾಡಿಸಿ ಹೋಟೆಲ್ ಗೆ ಅಂಟಿದ ಕಳಂಕ ದೂರಮಾಡುವ ಪ್ರಯತ್ನ ಮಾಡಲಾಗುತ್ತಿದೆ.ಇಬ್ಬರು ಪುರೋಹಿತರಿಂದ ಮಂತ್ರಘೋಷವಾಗುತ್ತಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *