ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆಹುಬ್ಬಳ್ಳಿಯ ನೇಕಾರ ನಗರದ ರಣದಮ್ಮಾ ಕಾಲೋನಿಯ ನಿವಾಸಿ ಅಮನುಲ್ಲಾ ಬಡಾಯಿ ಎಂಬ ಯುವಕನನ್ನು ಬರ್ಬರ್ ಹತ್ಯೆ ಗೈದು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಸಬಾಪೇಟೆ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಕಸಬಾಪೇಟೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಕುಂಬಾರ, ತಲೆ ಮರಿಸಿಕೊಂಡಿದ್ದ ರುದ್ರೇಶ ವಡ್ಡರ್, ನಾಗರಾಜ ಪೂಜಾರ ನ್ನು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣವೇ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು. ಬಂಧಿತರಿಂದ ಹತ್ಯೆಗೆ ಬಳಸಿದ ಚಾಕು, ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





