ಚಿಕ್ಕೋಡಿ: ಕಲಿಯುಗದಲ್ಲಿ ಸುವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಧರ್ಮ ಪ್ರಚಾರಕ್ಕಾಗಿ ಗುಜರಾತ್ ವಿದ್ಯಾ ತಾಯಿ ಜೊನಲ್ ಇನ್ ಚಾರ್ಜ್ಆಗಮಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂತ ನಿರಂಕಾರಿ ಮಂಡಳದ ಅಥಣಿ ವಿಜಯಪುರ ಸೆಕ್ಟರ್ ಸಂಯೋಜಕ ರಾಜೇಂದ್ರ ಸಾತಪುತೆ ಹೇಳಿದರು.ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಸಂತ ನಿರಂಕಾರಿ ಮಂಡಳದ ವತಿಯಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದ್ದು ನಾಳೆ ದಿನಾಂಕ ಹದಿನಾಲ್ಕರಂದು ಗುಜರಾತ್ ನ ವಿದ್ಯಾ ಬಹೆನಜಿ ಅವರು ಪ್ರಮುಖವಾಗಿ ಭಕ್ತಿಯ ಅರ್ಥ ಭಾವ ಯಾವ ರೀತಿ ಇರಬೇಕು,ಮನುಷ್ಯ ಹೇಗೆ ಕರ್ಮಗಳಿಂದ ಮುಕ್ತಿ ಹೊಂದಬೇಕು ಮತ್ತು ಮನುಕುಲದ ಒಳಿತಿಗಾಗಿ ಏನನ್ನು ಮಾಡಬೆಕು ಎನ್ನುವ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ. ಈ ಸತ್ಸಂಗ ಕಾರ್ಯಕ್ರಮದಲ್ಲಿ ಕರ್ನಾಟಕದ ವಿಜಯಪುರ, ಬೆಳಗಾವಿ, ಉಡುಪಿ,ಮಂಗಳೂರು, ಸೇರಿದಂತೆ ವಿವಿಧ ಭಾಗಗಳಿಂದ ಜನರ ಆಚಾರ ವಿಚಾರಗಳ ಒಗ್ಗೂಡಿಸುವಿಕೆ ನಡೆಯಲಿದೆ.ರಾಜ್ಯ ಮಟ್ಟದ ಮಹಿಳಾ ಸತ್ಸಂಗ ಸಮಾಗಮ ಕಾರ್ಯಕ್ರಮ ಇದಾಗಿದ್ದು ನಿರಂಕಾರಿ ಸದ್ಗುರು ಮಾತಾ ಸುಧಿಕ್ಷಾಜಿಯವರು ವಿಚಾರ ವಿನಿಮಯ ಮಾಡಲಿದ್ದಾರೆ ಜಗತ್ತಿನ ಎಲ್ಲ ಕಡೆಯೂ ಈ ಕಾರ್ಯಕ್ರಮ ಪ್ರಸ್ತುತಿ ನಡೆಯುತ್ತಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





