ಬೆಳಗಾವಿ: ಜಿಲ್ಲೆಯಲ್ಲಿ ೨೫ ಸಕ್ಕರೆ ಕಾರ್ಖಾನೆಗಳು ಇವೆ. ಅದರಲ್ಲಿ, ಒಂದು ಕಾರ್ಖಾನೆ ಮಾತ್ರ ಕಾರ್ಯನಿರ್ವಸುತ್ತಿಲ್ಲ. ಕಾರ್ಯನಿರ್ವಸುತ್ತಿರುವ ೨೪ ಕಾರ್ಖಾನೆಗಳ ಪೈಕಿ ೧೮ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದ ಬಾಕಿ ಬಿಲ್ಲನ್ನು ಸಂಪೂರ್ಣವಾಗಿ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಜಿಲ್ಲಾಡಳಿತದಿಂದ ಸೂಚನೆ ಹಾಗೂ ನೋಟಿಸ್ ಜಾರಿ ಮಾಡಿ, ಒತ್ತಡ ಹೆರಿದ ಬಳಿಕ ೧೮ ಕಾರ್ಖಾನೆಗಳು ಸಂಪೂರ್ಣವಾಗಿ ಬಾಕಿ ಬಿಲ್ಲನ್ನು ರೈತರಿಗೆ ಪಾವತಿ ಮಾಡಿವೆ.
ಇನ್ನೂಳಿದ ೬ ಕಾರ್ಖಾನೆಗಳ ಪೈಕಿ, ಒಂದು ಕಾರ್ಖಾನೆಯ ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ. ಎರಡು ಕಾರ್ಖಾನೆಗಳು ಮೂರು ದಿನಗಳ ಕಾಲವಕಾಶ ಕೇಳಲಾಗಿದೆ. ಸೋಮೆಶ್ವರ ಕಾರ್ಖಾನೆ ೧೧ ಕೋಟಿ ರೂ. ಪೈಕಿ ೮ ಕೋಟಿ ರೂ. ತುಂಬಲಾಗಿದೆ ಇನ್ನೂಳಿದ ೨ ಕೋಟಿ ರೂ. ತುಂಬಬೇಕಾಗಿದೆ.
ಪ್ರಮುಖವಾಗಿ ಕೃಷ್ಣಾ ನದಿಯ ರಾಜಾಪೂರ ಬ್ಯಾರೇಜ್ ದಿಂದ ಹೆಚ್ಚುವರಿ ನೀರನ್ನು ಹರಿಸಿದಾಗ ಮಾತ್ರ ಕೃಷ್ಣಾ ನದಿದಂಡೆಯಲ್ಲಿರುವ ಗ್ರಾಮಸ್ಥರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ಪ್ರತಿನಿತ್ಯವಾಗಿ ಪರಿಶೀಲನೆ ಮಾಡಲಾಗುವುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನ್ನು ಪರಿಶೀಲನೆ ಮಾಡಲಾಗುತ್ತಿದೆ ಮಳೆ ಅವಾಂತರದಿಂದ ಸಮಸ್ಯೆಯಾದರೆ ಎದುರಿಸಲು ಮುಂಜಾಗ್ರತೆ ವಹಿಸಿಲಾಗಿದೆ. ಪ್ರವಾಹದ ಸಂರಕ್ಷಣೆಗಾಗಿ ಪೈರ ಬ್ರಿಜ್ ಗೆ ತಂಡವನ್ನು ರಚಿಸಲಾಗಿದೆ ಇದರ ಮೂಲಕ ಜನರಿಗೆ ಸುರಕ್ಷತೆ ಒದಿಸಲಾಗುವುದು. ಖಾನಾಪೂರ ತಾಲೂಕಿನಲ್ಲಿ ಜಮೀನಲ್ಲಿ ನೀರಿನಿಂದ ಸಂಪರ್ಕ ಕಡಿತವಾಗಿದೆ ಈಗಾಗಲೇ ಅಧಿಕಾರಿಗಳಿಗೆ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





