ಮಂಡ್ಯ; ಪಟ್ಟಣದ ಕೆ. ಆರ್. ಪೇಟೆ ಶಾಸಕ ನಾರಾಯಣಗೌಡ ಅವರು ತಾಲ್ಲೂಕಿನ ಅಭಿವೃದ್ಧಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಹುಡುಕುವುದು ಬೇಡ…ತಾಲ್ಲೂಕಿನ ಜನತೆ ಶಾಸಕ ನಾರಾಯಣಗೌಡರ ಜೊತೆಗಿದ್ದಾರೆ. ಉಪಚುನಾವಣೆಯಲ್ಲಿ ನಾರಾಯಣಗೌಡರು ಮತ್ತೊಮ್ಮೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ ಎಂದು ಶಾಸಕರ ಬೆಂಬಲಿಗರಾದ ಚಂದ್ರಮೋಹನ್, ಬೊಮ್ಮೇನಹಳ್ಳಿ ಹರ್ಷ, ವಿನೋದ್ ಕುಮಾರ್, ಕೊಮ್ಮೇನಹಳ್ಳಿ ಜಗಧೀಶ್, ಅಘಲಯ ಮಂಜಣ್ಣ, ದಯಾನಂದ, ಕರ್ತೇನಹಳ್ಳಿ ಸುರೇಶ್, ಲಕ್ಷ್ಮಮ್ಮ, ಜಯಮ್ಮ ಮತ್ತು ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರುಪುರಸಭೆಯ ಸದಸ್ಯರಾದ ಸಂತೋಷ್ ತಮ್ಮ ನಾಲಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಶಾಸಕ ನಾರಾಯಣಗೌಡರ ಬಗ್ಗೆ ಮಾತನಾಡಬೇಕು..ಇಲ್ಲದಿದ್ದರೆ ನಾರಾಯಣಗೌಡರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಚಂದ್ರಮೋಹನ್ ಮತ್ತು ವಿನೋದ್ ಕುಮಾರ್ ಪುರಸಭೆಯ ಚುನಾವಣೆಯನ್ನು ಎದುರಿಸಲು ಶಕ್ತಿಯಿಲ್ಲದ ಬಸ್ ಕೃಷ್ಷೇಗೌಡ ಅವರು ಮಾಜಿಸ್ಪೀಕರ್ ಕೃಷ್ಣ ಅವರ ಎದುರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಕೇವಲ 600 ಮತಗಳನ್ನು ಪಡೆದು ಹೀನಾಯವಾಗಿ ಸೋತು ಸುಣ್ಣವಾಗಿರುವುದನ್ನು ಸಂತೋಷ್ ಕುಮಾರ್ ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು…ನಾರಾಯಣಗೌಡರು ಮಾಜಿಪ್ರಧಾನಿ ದೇವೇಗೌಡರ ಕುಟುಂಬದವರು ಮತ್ತು ಹೆಣ್ಣು ಮಕ್ಕಳು ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತು ಜೆಡಿಎಸ್ ಪಕ್ಷವನ್ನು ಬಿಡಲು ನಿರ್ಧಾರ ಮಾಡಿದ್ದು ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಯ ದೃಷ್ಠಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾರಾಯಣಗೌಡರು ರಾಜಕೀಯ ಏರಿಳಿತಗಳು ಏನೇ ಇದ್ದರೂ ಕೆ.ಆರ್.ಪೇಟೆ ಕ್ಷೇತ್ರವನ್ನು ಬಿಡುವುದಿಲ್ಲ. ತಮ್ಮ ಜನ್ಮಭೂಮಿಯ ಸೇವೆಗಾಗಿ ಮುಂಬೈನಿಂದ ಬಂದು ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಕ್ಷೇತ್ರದ ಜನತೆಯ ಮನೆ ಹಾಗೂ ಮನದಲ್ಲಿ ಬೆರೆತು ಹೋಗಿದ್ದಾರೆ..ಶಾಸಕರು ಹಣದಾಸೆಯನ್ನು ಉಳ್ಳವರಲ್ಲ..ತಾಲ್ಲೂಕಿನ ಇತಿಹಾಸದಲ್ಲಿ ತಮ್ಮ ಜೇಬಿನ ಹಣವನ್ನು ನೀರಿನಂತೆ ಖರ್ಚುಮಾಡಿ ಕ್ಷೇತ್ರದ ಜನರ ಸೇವೆಮಾಡಿದವರು ನಾರಾಯಣಗೌಡರು ಮಾತ್ರ ಎಂಬ ಸತ್ಯವನ್ನು ಗೌಡರ ವಿರೋಧಿಗಳು ತಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು… ಪತ್ರಿಕಾಗೋಷ್ಠಿಯಲ್ಲಿ ನಾರಾಯಣಗೌಡರ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು…
bigtvnews | Hubli Dharwad News | Kannada News | Karnataka News Hubli News | News In Hubli | Local news





