Breaking News

ರಾಜ್ಯದ ಬೆಳವಣಿಗೆ ಹಿಂದೆ ಬಿಜೆಪಿ ಕೈವಾಡ ಸ್ಪಷ್ಟ; ಹೊರಟ್ಟಿ

ಹುಬ್ಬಳ್ಳಿ: ರಾಜ್ಯದ ಎಲ್ಲ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡವಿದ್ದು, ಶಾಸಕರು, ಸಚಿವರು ರಾಜೀನಾಮೆ ನೀಡಿದಾಗಲು ಅವರಿಗೆ ವಿಶೇಷ ವಿಮಾನ, ಹೊಟೆಲ್ ಒದಗಿಸಿದ್ದು ಬಿಜೆಪಿ, ಬಿಜೆಪಿ ಕುದುರೆ ವ್ಯಾಪಾರ ಮಾಡಿದ್ದು ಸತ್ಯ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಎಲ್ಲರಿಗೂ ಸಚಿವರಾಗಲು ಸಾಧ್ಯವಿಲ್ಲ. ಇದನ್ನು ಅರಿಯದವರು ರಾಜೀನಾಮೆ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನೂ ಬಿಜೆಪಿ ಸಹಿತ ಮೈತ್ರಿ ಸರ್ಕಾರ ಕೆಡವಿ ತಮ್ಮ ಸರ್ಕಾರ ರಚನೆಗೆ ಹಾತೋರೆಯುತ್ತಿದ್ದು ಅದು ಆಗಲಾರದು. ಬುಧವಾರ ಸಿದ್ದರಾಮಯ್ಯ, ಎಚ್.ಡಿ.ದೇವೆಗೌಡರು ಈ ಬಗ್ಗೆ ಚರ್ಚೆ ನಡೆಸಿದ್ದು ಸರ್ಕಾರ ಉಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದರು. ರಾಜೀನಾಮೆ ನೀಡಿರುವ ಶಾಸಕರು, ಸಚಿವರು ಸ್ವೀಕರಗೆ ನೇರವಾಗಿ ರಾಜೀನಾಮೆ ನೀಡದೇ ಫ್ಯಾಕ್ಸ್, ತಮ್ಮ ಸಹಾಯಕ ಬಳಿ ನೀಡಿದ್ದಾರೆ. ಇನ್ನೂ ಕೆಲವರು ರಾಜ್ಯಪಾಲರಿಗೆ ನೀಡಿದ್ದಾರೆ. ಇಂತಹ ಸಂಸ್ಕೃತಿ ಹೋಗಬೇಕು. ರಾಜ್ಯದ ಜನತೆ ಐದು ವರ್ಷದ ಅವಧಿಗೆ ಆಯ್ಕೆ ಮಾಡಿಕಳಿಸಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ವೀಕರ್ ಏಕಾಏಕಿ 15 ಮಂದಿ ರಾಜೀನಾಮೆ ನೀಡಿದ ಬಗ್ಗೆ ಪರಿಶೀಲನೆ ಮಾಡಬೇಕಾಗುವುದು. ಸ್ವತಂತ್ರ ಅಭ್ಯರ್ಥಿಗಳಾದ ಶಂಕರ ನಾಗೇಶ ಒಂದು ಬಾರಿ ಬಿಜೆಪಿಗೆ, ಮತ್ತೊಂದು ಬಾರಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸುವುದು ಎಷ್ಟು ಸರಿ. ಎಲ್ಲರು ಒಟ್ಟಾಗಿ ರಾಜೀನಾಮೆ ಕೊಟ್ಟ ಹಿಂದೆ ಲಾಭಿ ನಡೆದಿರಬಹುದು. ಈ ಹಿಂದೆಯೇ ಕೆಲವರು ಬಹಿರಂಗವಾಗಿಯೇ ಕುದುವೆ ವ್ಯಾಪಾರದ ಬಗ್ಗೆ ಮಾತನಾಡಿದ್ದಾರೆ ಹಾಗಾಗಿ ಈ ಎಲ್ಲ ವಿಷಯದ ಬಗ್ಗೆ ಸ್ವೀಕರ್ ಪರಿಶೀಲನೆ ಮಾಡಬೇಕಾಗುವುದು. ವಿಧಾನ ಸಭೆಯಲ್ಲಿ ಬಹುಮತ ತೋರಿಸಿದರೇ ಸರಕಾರ ಉಳಿಯುವುದು ಇಲ್ಲದೇ ಹೋದರೆ ಅಂತ್ಯವಾಗುವುದು ಎಂದರು.

Share News

About admin

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *