ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ನೇರವಾಗಿ ಸಿಗ್ನಲ್ ಫ್ರೀ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆರು ಗಂಟೆ ಮೂರು ನಿಮಿಷಕ್ಕೆ ಆಗಮಿಸಿ ಸ್ಪೀಕರ್ ಕಚೇರಿಯನ್ನು ತಲುಪಿ ತಮ್ಮ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಬಿಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್, ಮಹೇಶ್ ಕುಮಟಳ್ಳಿ, ಮುನಿರತ್ನ,ಎಸ್.ಟಿ. ಸೋಮಶೇಖರ್, ಪ್ರತಾಪಗೌಡ ಪಾಟೀಲ್ ಸ್ಪೀಕರ್ ಕಚೇರಿಗೆ ತಲುಪಿದರು. ಅತೃಪ್ತ ಶಾಸಕರೆಲ್ಲರೂ ಕೈ ಬರಹದಲ್ಲೇ ರಾಜೀನಾಮೆ ಪತ್ರ ಬರೆದು ಮತ್ತೊಮ್ಮೆ ಸಲ್ಲಿಸಿದರು.ಕೆಲ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಖಾಲಿ ಲೆಟರ್ ಹೆಡ್ ತಂದಿದ್ದು, ಸ್ಪೀಕರ್ ಎದುರೇ ರಾಜೀನಾಮೆಯನ್ನು ಬರೆದುಕೊಟ್ಟಿದ್ದಾರೆ ಎನ್ನಲಾಗಿದ್ದು ಈ ಮೂಲಕ ಯಾರ ಹಸ್ತಕ್ಷೇಪವಿಲ್ಲದೇ, ಯಾರ ನೆರವು, ಒತ್ತಡವಿಲ್ಲದೇ ತಾವೇ ಖುದ್ದು ರಾಜೀನಾಮೆಯನ್ನು ಸಲ್ಲಿಸಿದ್ದೇವೆ ಅಂತ ಅತೃಪ್ತ ಶಾಸಕರು ನಿರೂಪಿಸಿದ್ದಾರೆ.ಇನ್ನು ಅತೃಪ್ತ ಶಾಸಕರ ರಾಜೀನಾಮೆ ಪಡೆದುಕೊಂಡ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜಕೀಯದಲ್ಲಿ ಒಂದು ವಿಶಿಷ್ಠ ಸನ್ನಿವೇಶ ಉಂಟಾಗಿದ್ದು, ರಾಜ್ಯ ವಿಧಾನಸಭಾ ಅಧ್ಯಕ್ಷನಾಗಿ ನನಗೆ ಇರುವ ಗೊಂದಲವಿದೆ, ಯಾವ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು, ಜನತೆಗೆ ಸ್ಪಷನೆ ನೀಡುವುದು ನನ್ನ ಜವಾಬ್ದಾರಿಯಾಗಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ಯಾರನ್ನು ಉಳಿಸುವುದು ಯಾರನ್ನು ಉಳಿಸುವುದು ಯಾರನ್ನು ಕಳುಸಿಸುವುದು ನನ್ನ ಕೆಲಸವಲ್ಲ ಅಂತ ಹೇಳಿದರು.ಇದೇ ವೇಳೆ ಅವರು ಮಾತನಾಡಿ ರಾಜೀನಾಮೆ ನೀಡ ಬೇಕು ಅಂತ ನನಗೆ ಶಾಸಕರು ನನಗೆ ತಿಳಿಸರಲಿಲ್ಲ, ಇದಲ್ಲದೇ ಭಾನುವಾರ ರಜೆ ದಿವಸವಾಗಿದ್ದು, ಸೋಮವಾರ ನನ್ನ ಕೆಲಸದಲ್ಲಿ ನಾನು ತೊಡಗಿದ್ದೆ, ಮಂಗಳವಾರ ನಾನು ಕಚೇರಿಗೆ ಬಂದ ವೇಳೆಯಲ್ಲಿ ಕಾನೂನಿನ ಪ್ರಕಾರ ಶಾಸಕರು ರಾಜೀನಾಮೆಯನ್ನು ಸಲ್ಲಿಸಬೇಕೆಂದು ನಿಯಮವಿದೆ. ಆದರೆ ನಮಗೆ ತಲುಪಿರುವ 13 ರಾಜೀನಾಮೆ ಪತ್ರಗಳಲ್ಲಿ 8 ರಾಜೀನಾಮೆ ಪತ್ರಗಳು ಸರಿ ಇರಲಿಲ್ಲ. ಹೀಗಾಗಿ ಸರಿ ಇರದ ರಾಜೀನಾಮೆಗಳನ್ನು ಪರೀಶಿಲನೇ ನಡೆಸಿ ಮತ್ತೊಮ್ಮೆ ರಾಜೀನಾಮೆಯನ್ನು ಸಲ್ಲಿಸುವಂತೆ ಸೂಚನೆ ನೀಡಿದೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸಲಾಗಲ್ಲ ಅಂತ ಹೇಳಿದರು.ಸುಪ್ರೀಂಕೋರ್ಟ್ ಏನು ಹೇಳಿತ್ತು? ಕರ್ನಾಟಕದ ಅತೃಪ್ತ ಶಾಸಕರು ಕೊಟ್ಟಿರುವ ರಾಜೀನಾಮೆ ಕುರಿತು ಇಂದು ಸಂಜೆ 6 ಗಂಟೆಯೊಳಗೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಎದುರು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜತೆಗೆ ಸರ್ಕಾರ ಮತ್ತು ಸ್ಪೀಕರ್. ಕೆ.ಆರ್. ರಮೇಶ್ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಸ್ಪೀಕರ್ ಎದುರು ಹಾಜರಾಗಲು ಬೆಂಗಳೂರಿಗೆ ಬರುವ ಅತೃಪ್ತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸ್ ಡಿಜಿಪಿ ಅವರಿಗೂ ನ್ಯಾಯಪೀಠ ಸೂಚನೆ ನೀಡಿದೆ. ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಕೊಟ್ಟಿರುವ ದೂರುಗಳ ಕುರಿತು ನಾಳೆ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





