Breaking News

ರಾಜೀನಾಮೆ ನೀಡಿದ ಶಾಸಕರಿಗೆ ಛೀ… ತೂ..

ದಾವಣಗೆರೆ: ರಾಜ್ಯ ಮೈತ್ರಿ ಕೂಟಕ್ಕೆ ರಾಜೀನಾಮೆ ನೀಡಿದ ಶಾಸಕರಿಗೆ ದಾವಣಗೆರೆಯಲ್ಲಿ ರೈತ ಸಂಘ ವತಿಯಿಂದ ಛೀಮಾರಿ ಹಾಕಲಾಯಿತು.ದಾವಣಗೆರೆ ಬಸ್ ನಿಲ್ದಾಣದ ಬಳಿ ರಾಜೀನಾಮೆ ನೀಡಿದ ೧೫ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಅಲ್ಲದೇ ಕಾರ್ಯಕರ್ತರು ಎಲೆ ಅಡಿಕೆ ತಿಂದು ಶಾಸಕರ ಭಾವಚಿತ್ರಕ್ಕೆ ಉಗುಳಿದರು.ಶಾಸಕರು ತಮ್ಮ ಸ್ವಾರ್ಥಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಗೆ ಜನರ ಕೆಲಸಗಳ ಬಗ್ಗೆ ಕಾಳಜಿ ಇಲ್ಲ. ಕೆಲಸ ಮಾಡುವುದನ್ನು ಬಿಟ್ಟು ರಾಜೀನಾಮೆ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮರು ಚುನಾವಣೆಗೆ ನಡೆಸಲು ಪ್ರತಿಭಟನಾಕಾರರು ಆಗ್ರಹಿಸಿದರು. ‌

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *