ಮಂಡ್ಯ: ಮಣಿಗನಹಳ್ಳಿಯ ಶ್ರೀ ಚಾಮುಂಡೇಶ್ವರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಉರಗತಜ್ಞ ಸ್ನೇಕ್ ಮುನ್ನಾ ಅವರಿಂದ ಹಾವುಗಳ ಪ್ರದರ್ಶನ ಮಾಡಲಾಯಿತು. ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆಯಲ್ಲಿ ಪ್ರಕೃತಿಯ ಸಮತೋಲನದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಹಾವುಗಳು ರೈತನ ಮಿತ್ರನಾಗಿವೆ. ರೈತ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಾಳುಮಾಡುವ ತೋಡಗಳು, ಇಲಿಗಳು ಮತ್ತು ಕ್ರಿಮಿಕೀಟಗಳನ್ನು ತಿಂದುಹಾಕುವ ಹಾವುಗಳನ್ನು ಹೊಡೆದು ಸಾಯಿಸದೇ ಅವುಗಳ ಪಾಡಿಗೆ ಅವು ಜೀವನ ನಡೆಸಲು ಅನುವು ಮಾಡಿಕೊಡಬೇಕು. ಹಾವುಗಳನ್ನು ಹೊಡೆದು ಸಾಯಿಸಬಾರದು ಎಂದು ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಮನವಿ ಮಾಡಿದರು. ವಿವಿಧ ಬಗೆಯ ಹಸಿರುಹಾವು, ಕಟ್ಟುಹಾವು, ಕೇರೆಹಾವು, ಉರಿಮಂಡಲದ ಹಾವು, ನಾಮಧಾರಿಹಾವು, ನಾಗರಹಾವು ಸೇರಿದಂತೆ ವಿವಿಧ ಹಾವುಗಳ ಬಗ್ಗೆ ಮಕ್ಕಳಿಗೆ ವಿವರಿಸಲಾಯಿತು… ಕೇರೆ ಹಾವು ಮತ್ತು ಹಸಿರುಹಾವನ್ನು ಮುಟ್ಟಿ ಸಂಭ್ರಮಿಸಿದ ಮಕ್ಕಳು ಸ್ನೇಕ್ ಮುನ್ನಾ ಅವರ ಪರಿಸರ ಕಾಳಜಿ ಹಾಗೂ ಹಾವುಗಳ ಸಂರಕ್ಷಣಾ ಕೆಲಸವನ್ನು ಶ್ಲಾಘಿಸಿದರು…ಶಾಲೆಯ ಅಧ್ಯಕ್ಷ ಡಾ.ದಿನೇಶ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಚೇತನ್ ಕುಮಾರ್, ಮಕ್ಕಳ ಪೋಷಕರು ಮತ್ತಿತರರು ಹಾವುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





